ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: "ಅಕ್ರಮ ಚಟುವಟಿಕೆ ನಡೆಸುತ್ತಿರುವ ಪಂಚಾಯತ್ ಅಧ್ಯಕ್ಷನನ್ನು ತಕ್ಷಣ ಬಂಧಿಸಿ"

ಬ್ರಹ್ಮಾವರ: ಶಿರಿಯಾರ ಪಂಚಾಯತ್ ಅಧ್ಯಕ್ಷ ಸುಧೀಂದ್ರ ಶೆಟ್ಟಿ ಮತ್ತು ನಾಗರಾಜ ಶೆಟ್ಟಿ ಅಕ್ರಮ ಕೂಟ ಕಟ್ಟಿಕೊಂಡು ,ಶಿರಿಯಾರ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ.ಪ್ರಶ್ನಿಸಲು ಬಂದವರನ್ನು ಬೆದರಿಸಿ ಹಲ್ಲೆ ನಡೆಸಲಾಗುತ್ತಿದೆ.ಈಗಾಗಲೇ ಇವರ ವಿರುದ್ಧ ಎಫ್ ಐಆರ್ ಆಗಿದ್ದು ತಕ್ಷಣ ಬಂಧಿಸಬೇಕು ಎಂದು ಸ್ಥಳೀಯರು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಶಿರಿಯಾರ ಗ್ರಾಮದ ಸಂತೋಷ ಪಾಣ (42) ಎಂಬವರು ಈ ಸಂಬಂಧ ಕೋಟ ಠಾಣೆಯಲ್ಲಿ ದೂರು ನೀಡಿದ್ದಾರೆ.

ಶಿರಿಯಾರ ಪಂಚಾಯತ್ ಅಧ್ಯಕ್ಷ ಸುಧೀಂದ್ರ ಶೆಟ್ಟಿ ಮತ್ತು ನಾಗರಾಜ ಶೆಟ್ಟಿ ತಮ್ಮ ರಿಕ್ಷಾವನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ್ದಾರೆ. ಸುಧೀಂದ್ರ ಶೆಟ್ಟಿ ಮತ್ತು ನಾಗರಾಜ ಶೆಟ್ಟಿ ಇಬ್ಬರು ಸೇರಿ ರಿಕ್ಷಾದಿಂದ ಹೊರಗೆ ಎಳೆದು" ನೀನು ಕೋಲ ಕಟ್ಟುವ ಪಾಣ. ಕೀಳು ಜಾತಿಯವನು ಎಂದು ಬೈದು ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿದ್ದಾರೆ.ಈ ವೇಳೆ ಸುಧೀಂದ್ರ ಶೆಟ್ಟಿ ಮರದ ದೊಣ್ಣೆಯಿಂದ ತಮ್ಮ ಬಲ ಕೈ ಹಾಗೂ ಎದೆಗೆ ಹೊಡೆದಿದ್ದಾರೆ.ಬಳಿಕ ಅವರಿಬ್ಬರೂ ಸೇರಿ ಎದೆ ಮತ್ತು ಹೊಟ್ಟೆಗೆ ಕಾಲಿನಿಂದ ತುಳಿದಿದ್ದಾರೆ.ಬಳಿಕ ಜೀವ ಬೆದರಿಕ ಹಾಕಿ ಹೋಗಿದ್ದಾಗಿ

ದೂರಿನಲ್ಲಿ ತಿಳಿಸಲಾಗಿದೆ.

ಸುದೀಂದ್ರ ಶೆಟ್ಟಿ ಶಿರಿಯಾರ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮ ಮರಳು ತೆಗೆದು ಮನೆಯ ಬಳಿ ಸಂಗ್ರಹ ಮಾಡುತ್ತಿದ್ದು, ಈ ಬಗ್ಗೆ ಸಂತೋಷ್ ಪಾಣ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ಕೊಡುತ್ತಾರೆಂದು ಈ ಕೃತ್ಯ ಮಾಡಿರುವುದಾಗಿ ಆರೋಪಿಸಲಾಗಿದೆ.ಪೊಲೀಸರು ಎಫ್ ಐ ಆರ್ ದಾಖಲಿಸಿದರೂ ಆರೋಪಿಯನ್ನು ಬಂಧಿಸಿಲ್ಲ.ಆದ್ದರಿಂದ ನಾವು ಎಸ್ಪಿಯವರ ಮೊರೆ ಹೋಗಿದ್ದೇವೆ ಎಂದು ಸಮತಾ ಸೈನಿಕ ದಳ ಹೇಳಿದೆ.

Edited By : Nagesh Gaonkar
Kshetra Samachara

Kshetra Samachara

06/02/2022 06:18 pm

Cinque Terre

13.11 K

Cinque Terre

2

ಸಂಬಂಧಿತ ಸುದ್ದಿ