ಮಂಗಳೂರು: ಕಾಲೇಜು ಬಳಿ ತಲ್ವಾರ್ ಹಿಡಿದು ದಾಂದಲೆ ನಡೆಸಿದ ಪ್ರಕರಣದ ಅರೋಪಿಯನ್ನು ಬರ್ಕೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ವಿಶ್ವಾಸ್ (22) ಬಂಧಿತ ಆರೋಪಿ, ಬಂಧಿತನಿಂದ ತಲ್ವಾರ್ ವಶಕ್ಕೆಪಡಿಸಿಕೊಳ್ಳಲಾಗಿದೆ.
ನಗರದ ಶ್ರೀದೇವಿ ಕಾಲೇಜು ಆವರಣದಲ್ಲಿ ಕ್ಷುಲ್ಲಕ ವಿಚಾರದಲ್ಲಿ ತಲ್ವಾರ್ ಹಿಡಿದು ಕೇರಳ-ಕರ್ನಾಟಕ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು.ಸ್ಕೂಟರ್ ಗುದ್ದಿದ ವಿಚಾರದಲ್ಲಿ ಕೇರಳ ವಿದ್ಯಾರ್ಥಿಗಳೊಂದಿಗೆ ಯುವಕರ ತಂಡವೊಂದು ವಾಗ್ವಾದ ನಡೆದಿತ್ತು.
ಇದನ್ನೇ ನೆಪವಾಗಿರಿಸಿ ತಲ್ವಾರ್ ಹಿಡಿದು ಕ್ಯಾಂಪಸ್ ಪ್ರವೇಶಿಸಿದ್ದ ಯುವಕರ ತಂಡ ತಲಾವಾರು ಹಿಡಿದು ದಾಂಧಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದರು.ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Kshetra Samachara
03/02/2022 07:11 pm