ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಗೋ ಕಳ್ಳರ ಹಾವಳಿ; ಹೈನುಗಾರಿಕೆಯನ್ನೇ ನಿಲ್ಲಿಸಲು ಮುಂದಾದ ದಂಪತಿ!

ಪಬ್ಲಿಕ್ ನೆಕ್ಸ್ಟ್ ಸ್ಪೆಷಲ್

ಮಂಗಳೂರು: ಗೋ ಕಳ್ಳರ ಹಾವಳಿಯಿಂದ ಬೇಸತ್ತು ಹೈನುಗಾರಿಕೆಯನ್ನೇ ನಿಲ್ಲಿಸಲು ಮುಂದಾಗಿದ್ದಾರೆ ನಗರದ ಬೋಂದೆಲ್‌ ನಿವಾಸಿ ಲಾರೆನ್ಸ್ ಡಿಸಿಲ್ವ ದಂಪತಿ. 18 ವರ್ಷಗಳಿಂದ ಹೈನುಗಾರಿಕೆ ನಡೆಸುತ್ತಾ ಬರುತ್ತಿರುವ ಇವರ ಮನೆಯಿಂದ ಈವರೆಗೆ ಒಟ್ಟು 48 ದನಗಳನ್ನು ಕಳ್ಳರು ಕದ್ದೊಯ್ದಿದ್ದಾರೆ!

ಒಂದೇ ದಿನದಲ್ಲಿ 7 ದನಗಳನ್ನು ಕದ್ದೊಯ್ಯಲಾಗಿದ್ದು, ಜ.23ರಂದು ರಾತ್ರಿ 2 ಗಬ್ಬದ ದನಗಳನ್ನು ಕಳ್ಳರು ಅಪಹರಿಸಿದ್ದಾರೆ.

ಲಾರೆನ್ಸ್ ಕುಟುಂಬಕ್ಕೆ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದ್ದು ಇದೇ ಗೋವುಗಳು. ಕರುವಿನಿಂದ ಅದನ್ನು ದೊಡ್ಡದು ಮಾಡುವವರೆಗೂ ಗೋವುಗಳನ್ನು ಈ ದಂಪತಿ ಮಕ್ಕಳಂತೆ ಸಾಕಿದ್ದಾರೆ.

ಆದ್ರೆ, ಬೆಳೆದು ದೊಡ್ಡದಾಗಿ ಹಾಲು ನೀಡುವ ಹಂತದಲ್ಲಿ ಕಟುಕರು ದನಗಳನ್ನು ಕದ್ದೊಯ್ದಾಗ ಎಂತವರಿಗೂ ಆಘಾತವಾಗುತ್ತದೆ. ಈ ಹಿಂದೆ ತುಂಬಿರುತ್ತಿದ್ದ ಹಟ್ಟಿಯಲ್ಲಿ ಈಗ 13 ದನಗಳಷ್ಟೇ ಇದೆ. ಕಳವಾಗಿರುವ ಕೆಲ ದನಗಳು ದಿನಕ್ಕೆ 30 ಲೀಟರ್ ಹಾಲು ನೀಡುತ್ತಿದ್ದವು! ಒಂದೊಂದು ದನ 50 ಸಾವಿರಕ್ಕೂ ಅಧಿಕ ಮೌಲ್ಯದ್ದು.

ಕಳೆದ 15 ವರ್ಷಗಳಲ್ಲಿ ಈ ಕುಟುಂಬ, ಕಳ್ಳರ ಕಾಟದಿಂದ ಬಸವಳಿದಿದೆ. ನೆರೆಯ ಇತರ ನಾಲ್ಕೈದು ಮನೆಗಳಿಂದಲೂ ದನಗಳ್ಳತನವಾಗುತ್ತಿದೆ. ಇನ್ಮುಂದೆಯಾದರೂ ಪೊಲೀಸರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಗೋ ಕಳ್ಳರನ್ನು ಬಗ್ಗುಬಡಿಯಬೇಕಾಗಿದೆ.

Edited By : Manjunath H D
Kshetra Samachara

Kshetra Samachara

01/02/2022 11:44 am

Cinque Terre

18.35 K

Cinque Terre

10

ಸಂಬಂಧಿತ ಸುದ್ದಿ