ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಗರದ ಲಾಡ್ಜ್ ನಲ್ಲಿ ವೇಶ್ಯವಾಟಿಕೆ ದಂಧೆ: ನಾಲ್ವರ ಬಂಧನ

ಉಡುಪಿ:ನಗರದ ಸರ್ವಿಸ್ ಬಸ್ ನಿಲ್ದಾಣದ ಲಾಡ್ಜ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಹುಡುಗಿಯರನ್ನು ವಶಪಡಿಸಿಕೊಂಡಿದ್ದಾರೆ .

ಗುರುರಾಜ್,ವಿಜಯ ಶೆಟ್ಟಿ, ಹೇಮಂತ್,ಸಂದೀಪ್ ಮೊಗವೀರ ಬಂಧಿತರು.ಈ ಸಂಬಂಧ ಲಾಡ್ಜ್ ಮಾಲೀಕ ರಮೇಶ್ ಶೆಟ್ಟಿ ಮೇಲೆ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ಉಡುಪಿ ನಗರದ ಹೃದಯ ಭಾಗದಲ್ಲಿ ಇರುವ ಎಸ್‌ಆರ್ ಯಾತ್ರಿ ನಿವಾಸ ಎಂಬ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಉಡುಪಿ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಮೋದ್ ಕುಮಾರ್ ಮತ್ತು ಅವರ ತಂಡ ದಾಳಿ‌ ನಡೆಸಿದಾಗ ಇಬ್ಬರು ಹುಡುಗಿಯರು ಮತ್ತು ನಾಲ್ಕು ಮಂದಿ‌ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸರಿಗೆ ಕೆಲವು ಸಮಯದಿಂದ ಇಲ್ಲಿ‌ ಅನೈತಿಕ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಇತ್ತು. ಯಾತ್ರಿ ನಿವಾಸ ಎಂಬ ಲಾಡ್ಜ್ ಉಡುಪಿ ನಗರಸಭೆಗೆ ಸೇರಿದ್ದು,ಈ ಲಾಡ್ಜ್ ನ್ನು ರಮೇಶ್ ಶೆಟ್ಟಿ ಎಂಬಾತ ಗುತ್ತಿಗೆ ಆಧಾರದಲ್ಲಿ ನಡೆಸುತ್ತಿದ್ದ.

Edited By :
Kshetra Samachara

Kshetra Samachara

28/01/2022 02:24 pm

Cinque Terre

12.83 K

Cinque Terre

1

ಸಂಬಂಧಿತ ಸುದ್ದಿ