ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಹಾಯಧನದ ಆಮಿಷ ನೀಡಿದ ಅಪರಿಚಿತ,ರಿಕ್ಷಾ ಚಾಲಕ ನಂಬಿ ಕೆಟ್ಟ

ಸುಳ್ಯ : ಸಮಾಜ ಕಲ್ಯಾಣ ಇಲಾಖೆಯಿಂದ ಐವತ್ತು ಸಾವಿರ ರೂ. ಸಹಾಯಧನ ತೆಗೆಸಿಕೊಡುವುದಾಗಿ ನಂಬಿಸಿದ ಅಪರಿಚಿತನೊಬ್ಬ ರಿಕ್ಷಾ ಚಾಲಕರೊಬ್ಬರಿಂದ 5 ಸಾವಿರ ರೂ. ಪಡೆದು ವಂಚಿಸಿದ ಘಟನೆ ಜನವರಿ 22ರಂದು ಸುಳ್ಯದಿಂದ ವರದಿಯಾಗಿದೆ.

ಸುಳ್ಯ ಬಸ್ ನಿಲ್ದಾಣದ ಬಳಿ ಬಾಡಿಗೆಗಾಗಿ ಕಾಯುತ್ತಿದ್ದ ಆಟೋ ಚಾಲಕನನ್ನು ಅಪರಿಚಿತ ವ್ಯಕ್ತಿಯೊಬ್ಬ ಬಾಡಿಗೆಗೆ ಎಂದು ಕರೆದು ಪೈಚಾರು ಕಡೆಗೆ ಹೋಗುತ್ತಾರೆ. ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಆತ ಫೋನ್ ನಲ್ಲಿ ಗಟ್ಟಿಯಾಗಿ ಮಾತಾಡುತ್ತ. " ಈ ಯೋಜನೆ 50 ಸಾವಿರ ರೂಪಾಯಿ ಸಹಾಯಧನ ಕೊಡುವಂಥದ್ದು. ರಿಕ್ಷಾ ಚಾಲಕರಿಗೆ ಮತ್ತು ಇತರ ಕುಶಲ ಕರ್ಮಿಗಳಿಗೆ ಮಾತ್ರ ಈ ಯೋಜನೆ. ಇದಕ್ಕೆ ಇಂದೇ ಕೊನೆಯ ದಿನ " ಎಂದು ಫೋನಲ್ಲಿ ಹೇಳುತ್ತಿದ್ದುದು ರಿಕ್ಷಾ ಚಾಲಕರಿಗೆ ಕೇಳುತ್ತಿತ್ತು. ಆತ ಪೈಚಾರು ಎಂಬ ಪ್ರದೇಶದಲ್ಲಿ ಇಳಿಯುವಾಗ ರಿಕ್ಷಾ ಚಾಲಕರು ಆತನೊಡನೆ " ಅದು ಯಾವುದು ಸರ್ ರಿಕ್ಷಾ ಚಾಲಕರಿಗೆ ಸಹಾಯಧನ ? " ಎಂದು ಕೇಳುತ್ತಾರೆ.

ಅದಕ್ಕೆ ಆತ " ಸಮಾಜ ಕಲ್ಯಾಣ ಇಲಾಖೆಯ ಐವತ್ತು ಸಾವಿರ ರೂಪಾಯಿ ಸಹಾಯಧನ ಯೋಜನೆ. ಬಡವರಿಗೆ ಮಾತ್ರ ಸಿಗುವಂಥದ್ದು. ಅದಕ್ಕೆ ಕೂಡಲೇ 5 ಸಾವಿರ ರೂಪಾಯಿ ಕಟ್ಟಿ ಅರ್ಜಿಯನ್ನು ಕೊಡಬೇಕು. ಇಂದೇ ಕೊನೆಯ ದಿನ. ನಿಮಗೆ ಬೇಕಿದ್ದರೆ ಒಂದು ಅವಕಾಶ ಇದೆ. ಮಾಡಿಕೊಡೋಣ " ಎನ್ನುತ್ತಾರೆ.

ಆತನ ಮಾತನ್ನು ನಂಬಿದ ರಿಕ್ಷಾ ಚಾಲಕ ಸುಳ್ಯ ಬ್ಯಾಂಕಿನಲ್ಲಿದ್ದ ತನ್ನ ಉಳಿತಾಯದ ಹಣದಿಂದ ರೂಪಾಯಿ 5 ಸಾವಿರ ತೆಗೆದು, ಆತ ಹೇಳಿದಂತೆ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಯೊಂದಿಗೆ ವ್ಯಕ್ತಿಗೆ ನೀಡಿರುತ್ತಾರೆ. ನಂತರ ರಿಕ್ಷಾವನ್ನು ಪುತ್ತೂರಿಗೆ ಕರೆದೋಯಿದು ದಾರಿ ಮಧ್ಯೆ ಚಾಲಕನನ್ನು ಮಾತಿಗೆಳೆದು ' ತನ್ನ ಪತ್ನಿ ಸಂಪ್ಯ ಪೋಲೀಸ್ ಠಾಣೆಯಲ್ಲಿ ಕಾನ್ ಸ್ಟೇಬಲ್ ಎಂದು ಹೇಳಿಕೊಳ್ಳುತ್ತಾನೆ. ರಿಕ್ಷಾ ಚಾಲಕರಿಗೆ ಮತ್ತಷ್ಟು ವಿಶ್ವಾಸ ಬರುತ್ತದೆ.

ಪುತ್ತೂರಿಗೆ ಹೋಗಿ ಕಚೇರಿಯೊಂದರ ಬಳಿ ನಿಲ್ಲಿಸಿ " ಅಧಿಕಾರಿ ಒಳಗಿದ್ದಾರ ನೋಡಿ ಕೂಡ್ಲೆ ಬರುತ್ತೇನೆ " ಎಂದು ಒಳಗೆ ಹೋದ ವ್ಯಕ್ತಿ ಅರ್ಧ ಗಂಟೆ ಕಳೆದರೂ ಹಿಂತಿರುಗಿ ಬಾರದಿದ್ದಾಗ ರಿಕ್ಷಾ ಚಾಲಕ ಒಳಗಡೆ ಹೋಗಿ ನೋಡಿದರೆ ಮೋಸ ಹೋದ ಅರಿವಾಗುತ್ತದೆ. ತಾನು ಮೋಸಹೋದೆ ಎಂದು ತಿಳಿದು ಸುಳ್ಯ ಪೋಲೀಸ್ ಠಾಣೆಗೆ ಬಂದು ದೂರು ನೀಡುತ್ತಾರೆ ಎಂದು ತಿಳಿದುಬಂದಿದೆ.

Edited By :
Kshetra Samachara

Kshetra Samachara

23/01/2022 10:50 pm

Cinque Terre

13.23 K

Cinque Terre

2

ಸಂಬಂಧಿತ ಸುದ್ದಿ