ಬಂಟ್ವಾಳ: ವಾಹನವೊಂದರಲ್ಲಿ ದನವನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಹಾಕಿ ಕೊಂಡೊಯ್ಯುತ್ತಿರುವ ಪ್ರಕರಣವೊಂದನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಇರಾ ಎಂಬಲ್ಲಿ ಪತ್ತೆಹಚ್ಚಿದ್ದು, ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಭಂದಕ ಮತ್ತು ಸಂರಕ್ಷಣಾ ಆದ್ಯಾದೇಶ 2020 ಪ್ರಕಾರ ಪ್ರಕರಣ ದಾಖಲಾಗಿದೆ.
ಸಜೀಪನಡು ಕಡೆಯಿಂದ ಮಹೀಂದ್ರಾ ವಾಹನದಲ್ಲಿ ಇರಾ ಶಾಲಾ ಮೈದಾನದತ್ತ ಕೊಂಡೊಯ್ಯುತ್ತಿರುವುದು ಸ್ಥಳೀಯರಿಗೆ ಕಂಡುಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಎಸ್.ಐ. ಹರೀಶ್ ಮತ್ತು ಸಿಬ್ಬಂದಿ ಪರಿಶೀಲಿಸಿದಾಗ, ದನವನ್ನು ಅಕ್ರಮವಾಗಿ ದನವನ್ನು ಹಿಂಸಾತ್ಮಕವಾಗಿ ವಧೆ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಮೇಲೆ ದಾಳಿ ನಡೆಸಿದಾಗ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ.
Kshetra Samachara
22/01/2022 03:52 pm