ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ:ಮಾನಸಿಕ ಅಸ್ವಸ್ತ ತಂದೆಯಿಂದ ಮಗನ ಮೇಲೆ ಕತ್ತಿಯಿಂದ ಹಲ್ಲೆ

ಸುಳ್ಯ: ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಯೋರ್ವರು ಸುಳ್ಯ ತಾಲೂಕು ಎಲಿಮಲೆ ಗ್ರಾಮದಲ್ಲಿ ಕ್ಯಾಂಟೀನ್ ಒಂದರ ಪಾತ್ರೆಗಳು ಮತ್ತು ಗ್ಯಾಸ್ ಸಿಲಿಂಡರನ್ನು ಎಸೆದು, ತನ್ನ ಮಗನ ಹೋಟೆಲ್ ಗೆ ನುಗ್ಗಿ ಮಗನಿಗೆ ಕತ್ತಿಯಿಂದ ಕಡಿದು ದಾಂಧಲೆ ನಡೆಸಿರುವ ಘಟನೆ ನಿನ್ನೆ ತಡ ರಾತ್ರಿ ಎಲಿಮಲೆಯಿಂದ ವರದಿಯಾಗಿದೆ.

ಎಲಿಮಲೆಯ ರಾಜೇಶ್ (55) ಎಂಬವರೇ ಈ ರೀತಿ ಮಾಡಿದ ವ್ಯಕ್ತಿ ಎಂದು ತಿಳಿದು ಬಂದಿದೆ. ಅವರು ನಿನ್ನೆ ರಾತ್ರಿ ಬಾಲಕೃಷ್ಣ ಎಂಬವರು ಎಲಿಮಲೆಯಲ್ಲಿ ನಡೆಸುತ್ತಿರುವ ಮಿನಿ ಕ್ಯಾಂಟೀನ್ ನ ಒಳನುಗ್ಗಿ ಪಾತ್ರೆಗಳನ್ನು ಅಲ್ಲೆ ಪಕ್ಕದಲ್ಲಿದ್ದ ಬಾವಿಗೆ ಎಸೆದಿದ್ದಲ್ಲದೇ, ಗ್ಯಾಸ್ ಸಿಲಿಂಡರನ್ನು ಸುಮಾರು ಅರ್ಧ ಕಿಮೀ. ಹೊತ್ತೊಯ್ದು ಬಿಸಾಡಿರುವುದಾಗಿ ತಿಳಿದು ಬಂದಿದೆ.

ಬಳಿಕ ಎಲಿಮಲೆಯಲ್ಲಿ ಹೋಟೆಲ್ ನಡೆಸುತ್ತಿರುವ ತನ್ನ ಪುತ್ರನ ರೂಮಿನ ಒಳನುಗ್ಗಿ ಅವರ ಕೈಗೆ ಕತ್ತಿಯಿಂದ ಕಡಿದಿರುವುದಾಗಿ ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಸ್ಥಳೀಯರು ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಆತನನ್ನು ವಿಚಾರಿಸಿದಾಗ ಮಾನಸಿಕ ಅಸ್ವಸ್ಥನೆಂದು ತಿಳಿದುಬಂದಿದೆ.

ಬಳಿಕ ಆತನನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡುಹೋಗಿರುವುದಾಗಿ ತಿಳಿದು ಬಂದಿದೆ.

Edited By :
Kshetra Samachara

Kshetra Samachara

19/01/2022 04:59 pm

Cinque Terre

9.04 K

Cinque Terre

0

ಸಂಬಂಧಿತ ಸುದ್ದಿ