ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ರಿ: ತಮ್ಮನನ್ನೇ ಕೊಂದು ಬಾವಿಗೆ ಎಸೆದನೇ ಅಣ್ಣ?: ಹೆಬ್ರಿ ಪೊಲೀಸರಿಂದ ತನಿಖೆ!

ಹೆಬ್ರಿ: ಕ್ಷುಲ್ಲಕ ಕಾರಣಕ್ಕೆ ಅಣ್ಣನೋರ್ವ ತನ್ನ ತಮ್ಮನನ್ನೇ ಹೊಡೆದು ಬಾವಿಗೆ ಎಸೆದು ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಇನ್ನೋರ್ವ ಸಹೋದರ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜ.13ರ ಬೆಳಗ್ಗೆ 8 ಗಂಟೆಯಿಂದ ಜ.14ರ ಬೆಳಗ್ಗೆ 9 ಗಂಟೆಯ ಮಧ್ಯಾವಧಿಯಲ್ಲಿ ಶಿವಪುರ ಗ್ರಾಮದ ಕಾಳಾಯಿ ಮುಳ್ಳುಗುಡ್ಡೆಯ ನಿವಾಸಿ ರವಿರಾಜ ಸೆಟ್ಟಿಗಾರ ಎಂಬವರ ಮೃತದೇಹ ಮನೆಯ ಹತ್ತಿರದ ಆವರಣವಿಲ್ಲದ ಬಾವಿಯಲ್ಲಿ ಪತ್ತೆಯಾಗಿತ್ತು. ಮೃತದೇಹವನ್ನು ಬಾವಿಯಿಂದ ಮೇಲೆತ್ತಿದಾಗ ತಲೆಯ ಹಿಂಬದಿಯಲ್ಲಿ ಗಾಯ ಆಗಿರುವುದು ಕಂಡು ಬಂದಿದ್ದರಿಂದ ಈ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ರವಿರಾಜರ ಇನ್ನೋರ್ವ ಸಹೋದರ ಪರ್ಕಳ 80 ಬಡಗುಬೆಟ್ಟು ಕೆಳಕಬ್ಯಾಡಿ ನಿವಾಸಿ ಜಯರಾಮ ಸೆಟ್ಟಿಗಾರ ಹೆಬ್ರಿ ಠಾಣೆಗೆ ದೂರು ನೀಡಿದ್ದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ರವಿರಾಜರ ತಲೆಯ ಹಿಂಭಾಗದಲ್ಲಿ ಯಾವುದೋ ಹರಿತವಾದ ಆಯಧದಿಂದ ಬಲವಾಗಿ ಕಡಿದು ಗಾಯಗಳಾಗಿರುವುದು ಕಂಡುಬಂದಿದೆ.

ಮನೆಯ ವಿಚಾರದಲ್ಲಿ ಶಂಕರನಾರಾಯಣ ಸೆಟ್ಟಿಗಾರ ಹಾಗೂ ರವಿರಾಜ್ ಸೆಟ್ಟಿಗಾರ್ ನಡುವೆ ವೈಮನಸ್ಸು ಇದ್ದು ಅದೇ ವಿಚಾರದಲ್ಲಿ ಶಂಕರನಾರಾಯಣ ಸೆಟ್ಟಿಗಾರ್, ತನ್ನ ತಮ್ಮ ರವಿರಾಜ ಸೆಟ್ಟಿಗಾರನನ್ನು ಕೊಲೆ ಮಾಡಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಘಟನೆ ಕುರಿತು ಮಾಹಿತಿ ಸಂಗ್ರಹಿಸಿರುವ ಹೆಬ್ರಿ ಪೊಲೀಸರು, ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

15/01/2022 06:20 pm

Cinque Terre

15.45 K

Cinque Terre

0

ಸಂಬಂಧಿತ ಸುದ್ದಿ