ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ ಪೊಲೀಸರ ಮಿಂಚಿನ ಕಾರ್ಯಾಚರಣೆ : ಐವರು ಅಂತರ್ ರಾಜ್ಯ ಕಳ್ಳರ ಬಂಧನ!

ಉಡುಪಿ: ಪರ್ಯಾಯ ಮಹೋತ್ಸವದ ಹೊತ್ತಿಗೆ ಕಳ್ಳತನಕ್ಕೆ ಆಗಮಿಸಿದ್ದ ಆಂದ್ರ ಮೂಲದ ಐವರನ್ನು ಬಂಧಿಸಿರುವ ಉಡುಪಿ ಪೊಲೀಸರು ಮುಂದೆ ನಡೆಯಬಹುದಾದ ಕಳ್ಳತನ,ಸುಲಿಗೆಯನ್ನು ತಪ್ಪಿಸಿದ್ದಾರೆ.

ಕುಂದಾಪುರದ ಶ್ರೀಮತಿ ಲಕ್ಷ್ಮಿ (54) ಎಂಬವರು ಸಂಕ್ರಾಂತಿ ಪ್ರಯುಕ್ತ ಉಡುಪಿ ಕೃಷ್ಣಮಠಕ್ಕೆ ಬಂದಿದ್ದರು.ಈ ಸಂದರ್ಭ 3 ಜನ ಮಹಿಳೆಯರು ಹಾಗೂ ಇಬ್ಬರು ಗಂಡಸರು ಸೇರಿ ಲಕ್ಷ್ಮಿಯವರ ಬಟ್ಟೆಯ ಕೈ ಚೀಲದ ಒಂದು ಬದಿಯನ್ನು ಹರಿತವಾದ ಆಯುಧದಿಂದ ಹರಿದು ಚೀಲದಲ್ಲಿದ್ದ ಸಣ್ಣ ಪರ್ಸ್‌ನ್ನು ಕಳವು ಮಾಡಿದ್ದು, ಪರ್ಸ್‌ನಲ್ಲಿ 10,000 ನಗದು ಮನೆಯ ಬೀಗ ಹಾಗೂ ಕೆಲವು ಬಿಲ್‌ಗಳು ಕಳವಾಗಿದ್ದವು.ಈ ಸಂಬಂಧ ಲಕ್ಷ್ಮೀ ನೀಡಿದ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಉಡುಪಿ ಪೊಲೀಸರು, ಕೃಷ್ಣಮಠದ ರಥಬೀದಿಯಲ್ಲಿರುವ ಸಿಸಿ ಕ್ಯಾಮರಾಗಳ ಫೂಟೇಜ್ ಪರಿಶೀಲನೆ ನಡೆಸಿ ಆರೋಪಿಗಳನ್ನು ಬಲೆಗೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ.

ತಮ್ಮ ಶೆಟ್ಟಿ, ಮಣಿ ಪ್ರಿಯಾಂಕ ಕಾಕಣಿ, ಇಟ್ಕಾ ಜಾನಿ ,ಇಟ್ಕಾ ಸಾಗರ ಮತ್ತು ಹರಿಬಾಬು ಬಂಧಿತ ಆರೋಪಿಗಳು.ಇವರೆಲ್ಲ ಆಂಧ್ರಪ್ರದೇಶ ರಾಜ್ಯದ ನೆಲ್ಲೂರು ವಾಸಿಗಳಾಗಿದ್ದು ಪರ್ಯಾಯ ಉತ್ಸವದಲ್ಲಿ ಸಾರ್ವಜನಿಕರಿಂದ ಪಿಕ್ ಪಾಕೆಟ್ ಮತ್ತು ಸುಲಿಗೆ ನಡೆಸಲೆಂದೇ ಆಗಮಿಸಿದ್ದರು.

ಪೊಲೀಸ್ ಅಧೀಕ್ಷಕರಾದ ಎನ್. ವಿಷುವರ್ಧನ್ ಆದೇಶದಂತೆ ಕುಮಾರಚಂದ್ರ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಸುಧಾಕರ ಸದಾನಂದ ನಾಯ್ಕ, ಡಿವೈಎಸ್‌ಪಿ ಉಡುಪಿ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್ ಪಿ, ಪೊಲೀಸ್ ಉಪ-ನಿರೀಕ್ಷಕರಾದ ವಾಸಪ್ಪ ನಾಯ್, ಪ್ರೊಬೇಷನರಿ ಪಿ.ಎಸ್.ಐ ರವರಾದ ಪ್ರಸಾದ ಸುಹಾಸ್, ಎಎಸ್‌ಐ ವಿಜಯ್, ಸಿಬ್ಬಂದಿಯವರಾದ ಜೀವನ್ ಕುಮಾರ್, ಸತೀಶ್, ಲೋಕೇಶ್, ಆಶಾಲತಾ, ಬಾಲಕೃಷಣ, ರಿಯಾಜ್ ಅಹ್ಮದ್ ಚೇತನ್, ಕಿರಣ್ ಸಂತೋಷ್ ರಾಠೋಡ್, ಸುಷ್ಮಾ, ರೂಪ, ಕಾರ್ತಿಕ್, ಗಂಗಾಧರಪ್ಪ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

Edited By : Nagaraj Tulugeri
Kshetra Samachara

Kshetra Samachara

15/01/2022 06:16 pm

Cinque Terre

9.96 K

Cinque Terre

1

ಸಂಬಂಧಿತ ಸುದ್ದಿ