ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಬಿದ್ರೆ ಪೇಟೆಯಲ್ಲಿ ದಾಂಧಲೆ ನಡೆಸಿದ್ದ ವಿದ್ಯಾರ್ಥಿಗಳು ಡ್ರಗ್ಸ್ ಸೇವಿಸಿದ್ದರು!

ಪಡುಬಿದ್ರೆ: ಉಡುಪಿಯ ಪಡುಬಿದ್ರಿಯಲ್ಲಿ ಕಳೆದ ವಾರ ಮೂವರು ವಿದ್ಯಾರ್ಥಿಗಳು ಅಮಲು ಪದಾರ್ಥ ಸೇವಿಸಿ, ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಿದ್ಯಾರ್ಥಿಗಳು ಡ್ರಗ್ಸ್ ಸೇವಿಸಿದ್ದು ವರದಿಯಲ್ಲಿ ಖಾತರಿಯಾಗಿದೆ. ಚೆನ್ನೈ ಮೂಲದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಯುವಕರು ಹಾಗೂ ಒರ್ವ ಯುವತಿ ಪಡುಬಿದ್ರಿ ಪೇಟೆಯಲ್ಲಿ ಅಮಲು ಪದಾರ್ಥ ಸೇವಿಸಿ, ಗಲಾಟೆ ಮಾಡಿ ಬೀದಿ ರಂಪ ಮಾಡಿದ್ದರು. ಕೊನೆಗೆ ಪಡುಬಿದ್ರಿ ಪೊಲೀಸರು ಹರಸಾಹಸಪಟ್ಟು ಮೂವರನ್ನೂ ಆಸ್ಪತ್ರೆಗೆ ಕರೆದೊಯ್ದು, ಡಗ್ಸ್ ಸೇವನೆ ಪರೀಕ್ಷೆ ನಡೆಸಿದ್ದರು. ಸದ್ಯ ವರದಿ ಪೊಲೀಸರ ಕೈ ಸೇರಿದ್ದು, ವರದಿಯಲ್ಲಿ ಇಬ್ಬರು ಯುವಕರು ಡಗ್ಸ್ ಸೇವಿಸಿರುವುದು ಖಾತರಿಯಾಗಿದೆ. ವಿದ್ಯಾರ್ಥಿನಿ ವರದಿ ನೆಗೆಟಿವ್ ಬಂದಿದ್ದು, ವರದಿ ಆಧಾರದಲ್ಲಿ ಇಬ್ಬರು ಯುವಕರ ಮೇಲೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagesh Gaonkar
PublicNext

PublicNext

12/01/2022 05:08 pm

Cinque Terre

47.4 K

Cinque Terre

2

ಸಂಬಂಧಿತ ಸುದ್ದಿ