ಶಿರ್ವ: ಜಿಲ್ಲೆಯಲ್ಲಿ ಎಗ್ಗಿಲ್ಲದೆ ದನ ಕಳ್ಳರ ಹಾವಳಿ ಮುಂದುವರೆದಿದ್ದು, ಇಂದು ಶಿರ್ವದಲ್ಲಿ ಖದೀಮರ ಹೊಸ ಉಪಾಯ ಬಯಲಾಗಿದೆ.
ಹೌದು, ಮದುವೆ ರೀತಿ ಸಿಂಗರಿಸಿದ ಇನ್ನೋವಾ ಕಾರಿನ ಹಿಂದೆ ಪಿಕಪ್ ವಾಹನದಲ್ಲಿ ಕಳ್ಳರು ದನ ಸಾಗಾಟ ಮಾಡುತ್ತಿದ್ದುದು ಪತ್ತೆಯಾಗಿದೆ!
ಮದುವೆ ವಾಹನದಂತೆಯೇ ಶೃಂಗರಿಸಿದ ಇನ್ನೋವಾದ ಹಿಂದೆ ಇದ್ದ ಪಿಕಪ್ ವಾಹನದಲ್ಲಿ 16 ದನಗಳನ್ನು ಸಾಗಿಸ ಲಾಗುತ್ತಿತ್ತು! ಈ ರೀತಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದಾಗ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕಾರ್ಯಾಚರಣೆ ಮಾಡಿದ್ದಾರೆ.
ಪೊಲೀಸರು ಮತ್ತು ಕಾರ್ಯಕರ್ತರ ಕಣ್ಣು ತಪ್ಪಿಸಲು ಗೋ ಕಳ್ಳರು ಹೊಸ ತಂತ್ರ ಹೂಡಿದ್ದರು. ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ತನಿಖೆ ನಡೆಯುತ್ತಿದೆ.
PublicNext
12/01/2022 01:24 pm