ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಸೆಲೂನ್ ಮಾಲೀಕ ಗೇರುಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ

ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಲಿಂಗಪ್ಪಯ್ಯ ಕಾಡು ರುದ್ರಭೂಮಿ ಬಳಿಯ ಬೆಳ್ಳಾಯರು ಶ್ರೀ ಚಂದ್ರಮೌಳೀಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಬದಿ ಹಾಡಿನಲ್ಲಿ ಯುವಕ ಗೇರುಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮುಲ್ಕಿ ಕೆಎಸ್ ರಾವ್ ನಗರ ಲಿಂಗಪ್ಪಯ್ಯಕಾಡು ನಿವಾಸಿ ಭರತ್ ಭಂಡಾರಿ (30) ಮೃತಪಟ್ಟವರು. ಭರತ್ ಗೆ ಸೆಲೂನ್ ಶಾಪ್ ಇದೆ. ಮಧ್ಯಾಹ್ನ ಮಿತ್ರರ ಜೊತೆ ಬೆನ್ನುನೋವು ಎಂದು ಹೇಳಿಕೊಂಡಿದ್ದ ಭರತ್, ಮನೆಯವರಿಗೆ ಮಧ್ಯಾಹ್ನ1.40 ಕ್ಕೆ ಫೋನ್ ಮಾಡಿದ್ದು ಬಳಿಕ ಕಾಲ್ ಮಾಡಿದರೂ ರಿಸೀವ್ ಮಾಡಿಲ್ಲ ಎಂದು ಮನೆಯವರು ತಿಳಿಸಿದ್ದಾರೆ.

ಅವರು ಪತ್ನಿ ಹಾಗೂ ಎರಡರ ಹರೆಯದ ಪುತ್ರಿಯನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

11/01/2022 09:36 pm

Cinque Terre

22.22 K

Cinque Terre

0

ಸಂಬಂಧಿತ ಸುದ್ದಿ