ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ಶ್ರೀ ಕೊರಗಜ್ಜನಿಗೆ ಅವಹೇಳನ; ಇಬ್ಬರು ಆರೋಪಿಗಳ ಬಂಧನ

ವಿಟ್ಲ: ವಿಟ್ಲ ಠಾಣೆ ವ್ಯಾಪ್ತಿಯ ಸಾಲೆತ್ತೂರಿನಲ್ಲಿ ಅನ್ಯ ಧರ್ಮದ ಮದುವೆ ಮನೆಯಲ್ಲಿ ಸ್ವಾಮಿ ಶ್ರೀ ಕೊರಗಜ್ಜನ ವೇಷ ಧರಿಸಿ, ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಮಂಗಲ್ಪಾಡಿ ನಿವಾಸಿ, ಪುತ್ತೂರು ಫಾತಿಮಾ ಅಂಗಡಿ ಮಾಲೀಕ ಅಹ್ಮದ್ ಮುಜಿತಾಬು(28) ಮತ್ತು ಬಾಯಾರು ಪದವು ನಿವಾಸಿ ಮೊಯ್ದೀನ್ ಮುನಿಶ್ (19) ಬಂಧಿತರು.

ಇಂದು ಹಿಂದೂ ಜಾಗರಣ ವೇದಿಕೆಯು ವಿಟ್ಲ ಬಂದ್ ಗೆ ಕರೆ ನೀಡಿದ್ದು, ಈ ನಡುವೆ ಪೊಲೀಸರು ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನುಳಿದವರ ಬಂಧನ ಶೀಘ್ರ ನಡೆಯಲಿದೆ.

Edited By : Shivu K
PublicNext

PublicNext

11/01/2022 09:09 am

Cinque Terre

35.46 K

Cinque Terre

3

ಸಂಬಂಧಿತ ಸುದ್ದಿ