ಕುಂದಾಪುರ: ಯುವತಿಯನ್ನು ಪ್ರೀತಿಸುತ್ತಿದ್ದ ಯುವಕ, ಆ ಯುವತಿ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಆಕೆಗೆ ಚೂರಿಯಿಂದ ಇರಿದು, ಬಳಿಕ ನೇಣಿಗೆ ಶರಣಾದ ಘಟನೆ ಕುಂದಾಪುರ ತಾಲೂಕಿನ ಶಿರಿಯಾರ ಎಂಬಲ್ಲಿ ಇಂದು ನಡೆದಿದೆ.
ರಿಕ್ಷಾ ಚಾಲಕ ರಾಘವೇಂದ್ರ ಕುಲಾಲ್(35) ಎಂಬಾತ ಇಂದು ಸಂಜೆ ಶಿರಿಯಾರ ಬಳಿ ಯುವತಿಗೆ ಚೂರಿಯಿಂದ ಇರಿದ ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಯಲ್ಲಿ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಶಿರಿಯಾರದ ಆಭರಣ ಮಳಿಗೆಯೊಂದರಲ್ಲಿ ಕೆಲಸಕ್ಕಿದ್ದ ಈ ಯುವತಿಗೆ ಕಳೆದ ಕೆಲವು ಸಮಯಗಳಿಂದ ಪ್ರೀತಿಸುವಂತೆ ಒತ್ತಡ ಹೇರುತ್ತಿದ್ದ ರಾಘವೇಂದ್ರ, ಇಂದು ಮಧ್ಯಾಹ್ನ ಯುವತಿ ಕೆಲಸ ನಿರ್ವಹಿಸುತ್ತಿದ್ದ ಸ್ಥಳದಿಂದ ಊಟಕ್ಕೆಂದು ಹೋದ ಸಂದರ್ಭ ಹಿಂಬಾಲಿಸಿಕೊಂಡು ಬಂದು ಚೂರಿಯಿಂದ ಇರಿದಿದ್ದಾನೆ.
PublicNext
29/12/2021 08:40 pm