ಮಂಗಳೂರು: ಡ್ರಗ್ಸ್ ದಂಧೆಯಿಂದ ಮಗಳನ್ನು ರಕ್ಷಿಸಲು ಕ್ರಿಶ್ಚಿಯನ್ ಮಹಿಳೆಯೊಬ್ಬರು ವಿಶ್ವ ಹಿಂದೂ ಪರಿಷತ್ ಗೆ ಮೊರೆ ಹೋಗಿದ್ದಾರೆ.
ಮಂಗಳೂರಿನ ಕ್ರೈಸ್ತ ಮಹಿಳೆ ವಿಶ್ವ ಹಿಂದೂ ಪರಿಷತ್ ಮುಖಂಡರ ನೆರವು ಕೇಳಿದ್ದು, ತಮ್ಮ ಮಗಳನ್ನು ಡ್ರಗ್ಸ್ ಕೂಪದಿಂದ ಕರೆತರಲು ಕೋರಿದ್ದಾರೆ. ಮಂಗಳೂರಿನ ಬಿಜೈ ಬಳಿಯ ಗ್ರೇಸಿ ಪಿಂಟೋ ಎಂಬ ಮಹಿಳೆ ಪತ್ರ ಬರೆದಿದ್ದು, ಸುರತ್ಕಲ್ ನಿವಾಸಿ ಶರೀಫ್ ಸಿದ್ದಿಕಿ ಎಂಬಾತನ ಡ್ರಗ್ಸ್ ದಂಧೆಯಲ್ಲಿ ತಮ್ಮ ಮಗಳು ಸಿಲುಕಿದ್ದಾಳೆ.
ಕಳೆದ ಮೂರು ವರ್ಷಗಳಿಂದ ಡ್ರಗ್ ನ ದಾಸಳಾಗಿರುವ ಮಗಳನ್ನು ಸರಿಪಡಿಸಿ ತನಗೆ ನೀಡಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.
ಮಗಳಿಗೆ ನಿರಂತರ ಲೈಂಗಿಕ ದೌರ್ಜನ್ಯ ಹಾಗೂ ಡ್ರಗ್ಸ್ ಪೂರೈಕೆ ಮಾಡುತ್ತಿದ್ದು, ಮಗಳು ಡ್ರಗ್ ಚಟಕ್ಕೆ ಬಿದ್ದು ಮಾನಸಿಕವಾಗಿ ಕುಗ್ಗಿ ಅನಾರೋಗ್ಯಕ್ಕೆ ಒಳಗಾಗಿದ್ದಾಳೆ. ಸಿದ್ದಿಕಿ ಮತ್ತು ಅವನ ಸ್ನೇಹಿತರಿಂದ ನಿರಂತರ ಡ್ರಗ್ಸ್ ಪೂರೈಕೆ ಮತ್ತು ದೌರ್ಜನ್ಯ ನಡೆಯುತ್ತಿದ್ದು, ಪೊಲೀಸ್ ಠಾಣೆ ಮತ್ತು ಸಮುದಾಯದ ಗುರುಗಳಿಗೆ ದೂರು ಕೊಟ್ಟರೂ ನ್ಯಾಯ ಸಿಕ್ಕಿಲ್ಲ. ನನ್ನ ಮಗಳನ್ನ ರಕ್ಷಣೆ ಮಾಡಿ ಎಂದು ವಿಎಚ್ ಪಿಗೆ ಪತ್ರ ಬರೆದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.
Kshetra Samachara
27/12/2021 04:32 pm