ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ನಿಲ್ಲಿಸಿದ್ದ ನೀರು ಸರಬರಾಜು ಟ್ಯಾಂಕರ್ ನಿಂದ ಬ್ಯಾಟರಿ ಕಳವು

ಮುಲ್ಕಿ: ಮುಲ್ಕಿ ಬಿಲ್ಲವ ಸಮಾಜ ಸೇವಾ ಎದುರು ಬದಿಯ ರಸ್ತೆಯಲ್ಲಿ ನಿಲ್ಲಿಸಿದ್ದ ನೀರು ಸರಬರಾಜು ಟ್ಯಾಂಕರ್ ನಿಂದ ಕಳ್ಳರು ಬ್ಯಾಟರಿ ಕಳವು ಮಾಡಿದ್ದಾರೆ.

ಮುಲ್ಕಿ ವಿಜಯ ಸನ್ನಿಧಿ ಬಹುಮಹಡಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಸೈಂಟ್ ಆನ್ಸ್ ಕಾಲೇಜ್ ವಿದ್ಯಾರ್ಥಿನಿಲಯಕ್ಕೆ ನೀರು ಸರಬರಾಜು ಮಾಡುತ್ತಿರುವ ಟ್ಯಾಂಕರ್ ಕಟ್ಟಡದ ಹಿಂಭಾಗದ ರಸ್ತೆ ಬದಿಯಲ್ಲಿ ಯಾವಾಗಲೂ ನಿಲುಗಡೆಯಾಗುತ್ತಿದ್ದು ಬುಧವಾರ ರಾತ್ರಿ ಟ್ಯಾಂಕರ್ ನ ಬ್ಯಾಟರಿ ಕಳವು ಮಾಡಲಾಗಿದೆ. ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.

ಬ್ಯಾಟರಿ ಮೌಲ್ಯ ಸುಮಾರು ಹತ್ತು ಸಾವಿರ ಎಂದು ಅಂದಾಜಿಸಲಾಗಿದ್ದು ಇತ್ತೀಚೆಗಷ್ಟೇ ನೂತನ ಬ್ಯಾಟರಿ ಕಳೆದ ಕೆಲ ತಿಂಗಳುಗಳ ಹಿಂದೆ ಇದೇ ಟ್ಯಾಂಕರ್ ನ ಬ್ಯಾಟರಿಯನ್ನು ಕಳವು ಈಗ ಎರಡನೇ ಬಾರಿ ಕಳ್ಳತನ ನಡೆದಿದೆ ಎಂದು ಟ್ಯಾಂಕರ್ ಚಾಲಕ ಗಣೇಶ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.

ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

23/12/2021 10:30 pm

Cinque Terre

18.49 K

Cinque Terre

0

ಸಂಬಂಧಿತ ಸುದ್ದಿ