ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಜ್ಯುವೆಲ್ಲರಿಯಲ್ಲಿ ಚಿನ್ನ ಕಳವು ಪ್ರಕರಣ; ಖದೀಮರು ಅಂದರ್ !

ಉಡುಪಿ: ಗ್ರಾಹಕರ ಸೋಗಿನಲ್ಲಿ ನಗರದ ಸುಲ್ತಾನ್ ಗೋಲ್ಡ್ ಆಂಡ್ ಡೈಮಂಡ್ಸ್ ಗೆ ಬಂದು 60 ಗ್ರಾಂ ತೂಕದ 3 ಲಕ್ಷ ರೂ. ಮೌಲ್ಯದ 4 ಚಿನ್ನದ ಬಳೆಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರ ಸೋಲಾಪುರ ನಿವಾಸಿಗಳಾದ ಆಸಿಫ್ ಅಶ್ಫಾಕ್ ಶೇಖ್ (32), ಆತನ ಪತ್ನಿ ನಾಝಿಯಾ (32), ಕುಂಬಾರಿ ಗ್ರಾಮದ ಸೌದಾಗರ್ ದಿಲೀಪ್ ಗೋಂದ್‌ ಕರ್(35) ಬಂಧಿತರು.

ನ.23ರಂದು ಇಬ್ಬರು ಬುರ್ಖಾ ಧರಿಸಿದ ಮಹಿಳೆಯರು, ಓರ್ವ ವ್ಯಕ್ತಿ ಹಾಗೂ ಮಗುವಿನೊಂದಿಗೆ ಜ್ಯುವೆಲ್ಲರಿಗೆ ಬಂದು ಈ ಕೃತ್ಯ ಎಸಗಿದ್ದರು. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕುರಿತು ತನಿಖೆ ನಡೆಸಿದ ನಗರ ಪೊಲೀಸರು, ಜ್ಯುವೆಲ್ಲರಿ ಆಸುಪಾಸಿನ ಸಿಸಿ ಟಿವಿ ಫೂಟೇಜ್ ಪರಿಶೀಲನೆ ನಡೆಸಿದಾಗ, ಎಂಎಚ್-13- ಎಫ್-4599ನೆ ನಂಬರಿನ ತವೇರಾ ಕಾರು ಕೃತ್ಯಕ್ಕೆ ಬಳಸಿರುವ ಬಗ್ಗೆ ಮಾಹಿತಿ ಕಲೆ ಹಾಕಿದರು.

ಹೀಗೆ ಆರೋಪಿಗಳ ಜಾಡು ಹಿಡಿದು ಮಹಾರಾಷ್ಟ್ರದ ಸೋಲಾಪುರಕ್ಕೆ ತೆರಳಿ ನಯಿ ಜಿಂದಗಿ ಎಂಬಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಬಂಧಿತರಿಂದ 1 ವಾಹನ, 1 ಮೊಬೈಲ್ ಹಾಗೂ 2,99,792 ರೂ. ಮೌಲ್ಯದ 4 ಚಿನ್ನದ ಬಳೆಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Edited By :
Kshetra Samachara

Kshetra Samachara

21/12/2021 02:53 pm

Cinque Terre

8.57 K

Cinque Terre

0

ಸಂಬಂಧಿತ ಸುದ್ದಿ