ಮಂಗಳೂರು: ಎಂಬಿಬಿಎಸ್ ಇಂಟರ್ಶಿಪ್ ಮಾಡುತ್ತಿದ್ದ ವಿದ್ಯಾರ್ಥಿನಿ ವೈಶಾಲಿ ಗಾಯಕ್ ವಾಡ್(25) ಆತ್ಮಹತ್ಯೆಗೆ ಪ್ರಿಯಕರನೊಂದಿಗಿನ ಮನಸ್ತಾಪವೇ ಕಾರಣವೆಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ. ಇದೀಗ ಪ್ರಿಯಕರನನ್ನು ಬಂಧಿಸಿರುವ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬೀದರ್ ಜಿಲ್ಲೆಯ ಆನಂದ ನಗರ ಮೂಲದ ವೈಶಾಲಿ ಗಾಯಕ್ ವಾಡ್, ನಗರದ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಇಂಟರ್ಶಿಪ್ ಮಾಡುತ್ತಿದ್ದರು. ನಿನ್ನೆ ಆಕೆ ಮಂಗಳೂರಿನ ಹೊರವಲಯದಲ್ಲಿರುವ ಕುತ್ತಾರು ಮಲ್ಲೂರು ಎಂಬಲ್ಲಿನ ಸಿಲಿಕಾನಿಯಾ ಅಪಾರ್ಟ್‌ಮೆಂಟ್ ನ ತನ್ನ ಪ್ಲ್ಯಾಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಆಕೆಯ ಆತ್ಮಹತ್ಯೆಗೆ ಪ್ರಿಯಕರನೊಂದಿಗಿನ ಮನಸ್ತಾಪವೇ ಕಾರಣವೆಂದು ತಿಳಿದು ಬಂದಿದೆ.
ವೈಶಾಲಿ ಗಾಯಕ್ ವಾಡ್ ಪ್ರಿಯಕರ ಕೇರಳದ ಪಾಲಕ್ಕಾಡ್ ಸುಜೀಶ್(24) ಕೂಡ ಕಣಚೂರು ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿ. ಆತನೂ ವೈಶಾಲಿಯಿದ್ದ ಅಪಾರ್ಟ್‌ಮೆಂಟ್ ನ ಮತ್ತೊಂದು ಫ್ಲ್ಯಾಟ್ ನಲ್ಲಿ ವಾಸಿಸುತ್ತಿದ್ದ. ಆದರೆ, ಇವರಿಬ್ಬರ ನಡುವೆ ಮನಸ್ತಾಪ ಮೂಡಿದ್ದು ಇದೇ ಆಕೆಯ ಆತ್ಮಹತ್ಯೆಗೆ ಕಾರಣವೆಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಇದೀಗ ಉಳ್ಳಾಲ ಪೊಲೀಸರು ಸುಜೀಶ್ ನನ್ನು ಬಂಧಿಸಿ, ಐಪಿಸಿ ಸೆಕ್ಷನ್ 306ರನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Kshetra Samachara
20/12/2021 10:12 pm