ಸಿದ್ದಾಪುರ: ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಇತಿಹಾಸ ಪ್ರಾಧ್ಯಾಪಕ ವಿಘ್ನೇಶ್ ಅವರ ವಿರುದ್ಧ ವಿದ್ಯಾರ್ಥಿನಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕಳೆದ ವರ್ಷ ಆನ್‌ಲೈನ್ ಕ್ಲಾಸ್ ನಡೆಯುವಾಗ ವಿಘ್ನೇಶ್ ತನ್ನ ಮೊಬೈಲ್‌ಗೆ ಪಠ್ಯಕ್ಕೆ ಸಂಬಂಧಿಸಿ ಮೆಸೇಜ್ ಅನಂತರ ವ್ಯಾಟ್ಸ್ ಆ್ಯಪ್‌ಗೆ ಮೆಸೇಜ್ ಕಳುಹಿಸುತ್ತಿದ್ದರು. ಇದಕ್ಕೆ ಎಚ್ಚರಿಕೆ ನೀಡಿದ ಬಳಿಕ ನಿಲ್ಲಿಸಿದ್ದರು. ಆದರೆ ಇದೀಗ ಕಾಲೇಜಿನಲ್ಲಿರುವಾಗ ಹಿಂಬಾಲಿಸಿಕೊಂಡು ಬಂದು ಮದುವೆಯಾಗು ಎಂದು ಒತ್ತಾಯಿಸಿ ಮಾನಸಿಕ, ಲೈಂಗಿಕ ಹಿಂಸೆ ನೀಡುತ್ತಿದ್ದಾರೆ. ಮಾತ್ರ ವಲ್ಲದೆ ಬೆದರಿಕೆ ಹಾಕಿದ್ದಾರೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾರೆ.
Kshetra Samachara
18/12/2021 09:14 pm