ಬಜಪೆ: ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಯುವಕ ಶವವಾಗಿ ಮರವೂರಿನ ಡ್ಯಾಮ್ ಸಮೀಪ ಪತ್ತೆಯಾಗಿದ್ದಾನೆ.
ವಾಮಂಜೂರು ಮೂಡುಶೆಡ್ಡೆ ನಿವಾಸಿ ಯೋಗೀಶ್ (31) ಮೃತಪಟ್ಟ ಯುವಕ. ಯೋಗೀಶ್ ಅವಿವಾಹಿತರಾಗಿದ್ದು, ವೃತ್ತಿಯಲ್ಲಿ ಚಾಲಕರಾಗಿದ್ದ. ಅವರ ಬೈಕ್ ಎರಡು ದಿನಗಳ ಹಿಂದೆ ಗುರುಪುರ ಸೇತುವೆ ಬಳಿಯ ರಾಷ್ಟ್ರೀಯ ಹೆದ್ದಾರಿಯ ಕುಕ್ಕುದಕಟ್ಟೆಯಲ್ಲಿ ಪತ್ತೆಯಾಗಿತ್ತು.
ಯೋಗೀಶ್ ನದಿಗೆ ಹಾರಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಅಗ್ನಿ ಶಾಮಕದಳ ಮತ್ತು ಬಜಪೆ ಪೊಲೀಸರು ಗುರುಪುರ ನದಿಯಲ್ಲಿ ಹುಡುಕಾಟ ನಡೆಸಿದ್ದರು. ನಿನ್ನೆ ಶವ ಪತ್ತೆಯಾಗಿದೆ.
Kshetra Samachara
11/12/2021 03:19 pm