ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪಡುವಿನಲ್ಲಿ ವ್ಯಕ್ತಿ ಮೇಲೆ ಹಲ್ಲೆ; ನಾಲ್ವರು ವಶಕ್ಕೆ

ಮಂಗಳೂರು: ನಗರದ ಹೊರವಲಯದ ನೀರುಮಾರ್ಗ ಪಡು ಎಂಬಲ್ಲಿ ನಿನ್ನೆ ರಾತ್ರಿ ಅಬ್ದುಲ್ ರಿಯಾಜ್ ಎಂಬವರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಿಯಾಜ್ ಮೇಲೆ ಅಪರಿಚಿತ 5 ರಿಂದ 6 ಮಂದಿ ಹಲ್ಲೆ ನಡೆಸಿದ್ದರು.ರಿಯಾಜ್,ಮಂಗಳೂರು ನಗರದಿಂದ 15 ಕಿ.ಮೀ . ದೂರದ ಅಡ್ಯಾರ್ ಪಡುವಿನ ನಿವಾಸಿ‌. ಇವರ ತಲೆಗೆ ಪೆಟ್ಟಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಗಾಯಾಳು ಅಬ್ದುಲ್ ರಿಯಾಜ್ ಆಸ್ಪತ್ರೆಯಲ್ಲಿದ್ದು ಹಲ್ಲೆಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ರಿಟ್ಜ್ ಕಾರಿನಲ್ಲಿ ಮಹಿಳೆಯರು ಧರಿಸುವ ಒಂದು ಜತೆ ಚಪ್ಪಲಿ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.

Edited By : Manjunath H D
Kshetra Samachara

Kshetra Samachara

11/12/2021 03:19 pm

Cinque Terre

11.48 K

Cinque Terre

0

ಸಂಬಂಧಿತ ಸುದ್ದಿ