ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಪರಾರಿಯಾಗಿದ್ದ ಖೈದಿ ಕಿನ್ನಿಗೋಳಿಯಲ್ಲಿ 'ಬಂಧಿ'

ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆಯಿಂದ ಭಾನುವಾರ ಸಂಜೆ ಪರಾರಿಯಾಗಿದ್ದ ವಿಚಾರಣಾಧೀನ ಕೈದಿ ಇಂದು ಮಧ್ಯಾಹ್ನ ಕಿನ್ನಿಗೋಳಿ ಸಮೀಪ ಪತ್ತೆಯಾಗಿದ್ದಾನೆ. ದಾವಣಗೆರೆ ನಿವಾಸಿ ಸಮೀರ್ (24) ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ. ಸಮೀರ್, ಮುಲ್ಕಿಯಲ್ಲಿ ನಡೆದಿದ್ದ ಕಳ್ಳತನದಲ್ಲಿ ಭಾಗಿಯಾಗಿದ್ದಾನೆ ಎಂಬ ಸಂಶಯದ ಮೇರೆಗೆ ಬಂಧಿಸಿದ್ದು, ಆತನನ್ನು ಭಾನುವಾರ ಸಂಜೆ ಸ್ಥಳ ಪರಿಶೀಲನೆಗಾಗಿ ಕರೆದುಕೊಂಡು ಹೋಗುವಾಗ ಜೀಪಿನಿಂದ ಹಾರಿ ಪರಾರಿಯಾಗಿದ್ದ.

ಭಾನುವಾರ ರಾತ್ರಿ ಪೊಲೀಸರು ಮುಲ್ಕಿ ರಾಷ್ಟ್ರೀಯ ಹೆದ್ದಾರಿ, ಪಂಚಮಹಲ್ ದೇವಸ್ಥಾನದ ಪರಿಸರ ಇತ್ಯಾದಿ ಕಡೆ ಬೆಳಗಿನವರೆಗೂ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ.ಇಂದು ಬೆಳಗ್ಗಿನಿಂದಲೂ ಮುಲ್ಕಿಯ ಆಟೋ ಚಾಲಕರು ಪೊಲೀಸರೊಂದಿಗೆ ತೀವ್ರ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಮಧ್ಯಾಹ್ನ ಕಿನ್ನಿಗೋಳಿ ಸಮೀಪ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.

Edited By : Nirmala Aralikatti
Kshetra Samachara

Kshetra Samachara

29/11/2021 05:57 pm

Cinque Terre

17.58 K

Cinque Terre

0

ಸಂಬಂಧಿತ ಸುದ್ದಿ