ಸುರತ್ಕಲ್: ಸುರತ್ಕಲ್ ಸಮೀಪದ ಎಂಆರ್ ಪಿಎಲ್ ರಸ್ತೆಯ ಕಟ್ಲ ತಿರುವು ಬಳಿಯ ಎಸ್ ಬಿ ಐ ಬ್ಯಾಂಕಿನ ಎಟಿಎಂ ನ್ನು ವ್ಯಕ್ತಿ ಯೋರ್ವ ಹಾನಿ ಮಾಡಿದ್ದಾನೆ
ಕಳೆದ ಸೆ.9 ರಂದು ಇದೇ ಎಟಿಎಂ ನ ಗಾಜನ್ನು ಒಡೆದು ಹಾಕಲಾಗಿತ್ತು.ಸುರತ್ಕಲ್ ಠಾಣೆಯಲ್ಲಿ ಕೇಸು ದಾಖಲಾಗಿ ವಿಚಾರಣೆ ನಡೆಸಲಾಗಿತ್ತು.
ಮತ್ತೆ ಎರಡನೇ ಬಾರಿ ಬ್ಯಾಂಕಿನ ಎಟಿಎಂ ಯಂತ್ರ ಉರುಳಿಸಿ ಎಸಿ, ಸಿಸಿ ಟಿವಿ ಗಾಜನ್ನು ಪುಡಿ ಮಾಡಲಾಗಿದೆ. ಹೆಲ್ಮೆಟ್ ಒಂದರಲ್ಲಿ ಗಾಜನ್ನು ಒಡೆದು ಒಳಗಿನ ಎಸಿ ಯನ್ನು ಹಾಳುಗೆಡವಲಾಗಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ.
ಕಟ್ಟಡದ ಮಾಲಕ ಸತೀಶ್ ಅವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Kshetra Samachara
29/11/2021 12:23 pm