ಉಡುಪಿ: ನಿನ್ನೆ ಪೋಲಿಸರಿಗೆ ಚಳ್ಳೆಹಣ್ಣು ತಿನ್ನಿಸಿ ನಾಪತ್ತೆಯಾಗಿದ್ದ ಅಕ್ರಮ ಮರಳು ಸಾಗಾಟದ ಲಾರಿ ಚಾಲಕ ಯಲ್ಲಪ್ಪ ಜಾಲಾಪುರ ಇಂದು ಉಡುಪಿ ನಗರ ಠಾಣೆಗೆ ಸರೆಂಡರ್ ಆಗಿದ್ದಾನೆ.
ಕೊರಂಗ್ರಪಾಡಿಯಲ್ಲಿ ನಿನ್ನೆ ಬೆಳಿಗ್ಗೆ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದಾಗ ಉಡುಪಿ ಜಿಲ್ಲಾ ಲಾರಿ ಮಾಲಕರ ಸಂಘದ ಪದಾಧಿಕಾರಿಗಳು ರೆಡ್ ಹ್ಯಾಂಡಾಗಿ ಹಿಡಿದಿದ್ದರು.ಬಳಿಕ ಲಾರಿಯನ್ನು ಉಡುಪಿ ನಗರ ಠಾಣೆಗೆ ತರುವಂತೆ ಪೋಲಿಸ್ ಪೇದೆ
ಸೂಚಿಸಿದ್ದರು.ಆದರೆ ಲಾರಿಯನ್ನು ನಗರ ಠಾಣೆಗೆ ಕೊಂಡೊಯ್ಯದೇ ಪಡು ಅಲೆವೂರಿಗೆ ಕೊಂಡು ಹೋಗಿ ಮರಳನ್ನು ಅನ್ ಲೋಡ್ ಮಾಡಿದ್ದ !ಈ ಪರಾರಿ ಪ್ರಕರಣ ಬಿಸಿಬಿಸಿ ಚರ್ಚೆಗೆ ಗ್ರಾಸವಾಗುತ್ತಲೇ ಪೊಲೀಸರ ಮೇಲೂ ಒತ್ತಡ ಹೆಚ್ಚಿತ್ತು.ಇವತ್ತು ಬೆಳಿಗ್ಗೆ ಲಾರಿಯಲ್ಲಿ ಮರಳನ್ನು ತುಂಬಿಸಿ ಚಾಲಕ ಯಲ್ಲಪ್ಪ ಜಾಲಾಪುರ ನಗರ ಠಾಣೆಗೆ ಸರೆಂಡರ್ ಆಗಿದ್ದಾನೆ.
Kshetra Samachara
26/11/2021 12:46 pm