ಮಂಗಳೂರು: ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಅದಲು ಬದಲಾಗಿದೆ ಎಂದು ಆರೋಪಿಸಲಾಗಿದ್ದ ಮಗು ಡಿಎನ್ಎ ವರದಿ ಬರುವ ಮೊದಲೇ ಉಸಿರಾಟದ ಸಮಸ್ಯೆಯಿಂದ ಇಂದು ಮೃತಪಟ್ಟಿದೆ.
ಉಸಿರಾಟ ತೊಂದರೆಯಿದ್ದ ಈ ಮಗುವಿಗೆ ಲೇಡಿಗೋಷನ್ ಎಂಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಮಗು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದೆ. ಕುಂದಾಪುರ ಮೂಲದ ಈ ಮಗುವಿನ ಪೋಷಕರು ಹುಟ್ಟಿದ ಮಗು ಆಸ್ಪತ್ರೆಯಲ್ಲಿಯೇ ಅದಲು ಬದಲಾಗಿದೆ ಎಂದು ಆರೋಪಿಸಿ ಅ.15ರಂದು ಠಾಣೆ ಮೆಟ್ಟಿಲೇರಿದ್ದರು. ಈ ಸಂದರ್ಭ ಅವರು ಹೆಣ್ಣು ಮಗು ಹುಟ್ಟಿದ್ದು ಎಂದು ಹೇಳಲಾಗಿತ್ತು. ಆದರೆ, ಆ ಬಳಿಕ ತಮಗೆ ಗಂಡು ಮಗು ನೀಡಿದ್ದಾಗಿ ಆರೋಪಿದ್ದಾರೆ.
ಈ ಬಗ್ಗೆ ನ್ಯಾಯಾಲಯದ ಆದೇಶದಂತೆ ಡಿಎನ್‌ಎ ಪರೀಕ್ಷೆಗೆ ಸ್ಯಾಂಪಲ್ ಹೈದರಾಬಾದ್‌ಗೆ ಕಳುಹಿಸಲಾಗಿತ್ತು. ಆದರೆ, ವರದಿ ಬರುವ ಮೊದಲೇ ಉಸಿರಾಟ ಸಮಸ್ಯೆಯಿಂದ ಮಗು ಮೃತಪಟ್ಟಿದೆ. ಈ ಬಗ್ಗೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಮಾಹಿತಿ ನೀಡಿದ್ದು, ಕಾನೂನಿನ ಪ್ರಕಾರವೇ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಹೇಳಿದ್ದಾರೆ.
Kshetra Samachara
15/11/2021 06:24 pm