ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: ಕೋಡಿಂಬಾಳದಲ್ಲಿ ಭರ್ಜರಿ ʼಕೋಳಿ ಕಾಳಗʼ; ಇಲಾಖೆ ಮೌನ!

ಕಡಬ: ಠಾಣಾ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಗುರಿಯಡ್ಕದಲ್ಲಿಇದೀಗ ದೊಡ್ಡ ಮಟ್ಟದಲ್ಲಿ ಕೋಳಿ ಅಂಕ ನಡೆಯುತ್ತಿದ್ದು, ಜನ ಜಾತ್ರೆಯೇ ಕಂಡು ಬಂದಿದೆ. ಇಲ್ಲಿ ಹಣವನ್ನು ಪಣಕ್ಕಿಟ್ಟು ಕೋಳಿ ಅಂಕ(ಜೂಜು) ನಡೆಸಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಪರಿಸರದಲ್ಲಿ ಕೋಳಿ ಅಂಕ ಅವ್ಯಾಹತವಾಗಿ ನಡೆಯುತ್ತಿದೆ. ಕೋಳಿ ಕಾಳಗದ ಅಖಾಡಕ್ಕೆ ಶಾಮೀಯಾನ ಹಾಕಿ ವ್ಯವಸ್ಥಿತವಾಗಿಯೇ ನಡೆಯುತ್ತಿದ್ದು, ವಾಹನಗಳ ಸಹಿತ ಜನ ಸಂದಣಿಯೇ ಸೇರಿದೆ.

ಕೋಡಿಂಬಾಳ ಅಲ್ಲದೆ, ಕಡಬ ಠಾಣಾ ವ್ಯಾಪ್ತಿಯ ಇತರೆಡೆಗಳಲ್ಲಿಯೂ ಕೋಳಿ ಅಂಕ ನಡೆಯುತ್ತಿದೆ. ಊರಿನ ಜಾತ್ರಾ ಸಮಯದಲ್ಲಿ ಮಾತ್ರ ನಡೆಯುವ ಸಾಂಪ್ರದಾಯಿಕ ಕೋಳಿ ಅಂಕವನ್ನು ಹೊರತುಪಡಿಸಿ ಈ ರೀತಿಯಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ರಾಜಾರೋಷವಾಗಿ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಯಾಕೆ ಮೌನವಾಗಿದೆ ಎಂಬುದು ತಿಳಿಯುತ್ತಿಲ್ಲ! ಇಲಾಖೆಯೇ ಇದಕ್ಕೆ ಉತ್ತರ ನೀಡಬೇಕಿದೆ.

Edited By : Nagaraj Tulugeri
Kshetra Samachara

Kshetra Samachara

31/10/2021 04:35 pm

Cinque Terre

15.66 K

Cinque Terre

0

ಸಂಬಂಧಿತ ಸುದ್ದಿ