ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಭಜರಂಗದಳದ ಕಾರ್ಯಕರ್ತರಿಂದ ಅಕ್ರಮ ಕಸಾಯಿಖಾನೆಗೆ ದಾಳಿ

ಮುಲ್ಕಿ: ಕಿನ್ನಿಗೋಳಿ ಸಮೀಪದ ಏಳಿಂಜೆ ಸಂಕಲಕರಿಯದ ಬಳಿ ಶುಕ್ರವಾರ ನಸುಕಿನ ಜಾವ ಮಾರುತಿ ಓಮ್ನಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 50 ಕೆ.ಜಿ.ಗೋಮಾಂಸ ಹಾಗೂ ಆಕ್ರಮವಾಗಿ ಕಸಾಯಿಖಾನೆಯಲ್ಲಿ ಕಟ್ಟಿಹಾಕಿದ್ದ 8 ಗೋವುಗಳನ್ನು ಮೂಲ್ಕಿ ಹಾಗೂ ಮೂಡುಬಿದಿರೆ ಪ್ರಖಂಡದ ಭಜರಂಗದಳದ ಕಾರ್ಯಕರ್ತರು ದಾಳಿ ನಡೆಸಿ ವಶಪಡಿಸಿಕೊಂಡು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಆರೋಪಿಗಳನ್ನು ಹಳೆಯಂಗಡಿ, ಪುನರೂರು, ಹಾಗೂ ಸಂಕಲಕರಿಯ ನಿವಾಸಿಗಳಾದ ಮಹಮ್ಮದ್ ಹಸನಬ್ಬ,ರಫೀಕ್,ಇದಿನಬ್ಬ ಹಾಗೂ ಇಬ್ರಾಹಿಂ ಎಂದು ಗುರುತಿಸಲಾಗಿದೆ. ಆರೋಪಿಗಳು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಪ್ರದೇಶವಾದ ಉಡುಪಿ ಜಿಲ್ಲೆಯ ಸಂಕಲಕರಿಯ ದಿಂದ ಕಿನ್ನಿಗೋಳಿ ಕಡೆಗೆ ಓಮ್ನಿಯಲ್ಲಿ ಶುಕ್ರವಾರ ಬೆಳಗಿನ ಜಾವ ಸಂಶಯಾಸ್ಪದ ರೀತಿಯಲ್ಲಿ ಸುಮಾರು ಒಂದು ಕ್ವಿಂಟಾಲ್ ನಷ್ಟು ಗೋಮಾಂಸ ಸಾಗಿಸುತ್ತಿದ್ದರು ಎನ್ನಲಾಗಿದೆ.

ಈ ಸಂದರ್ಭ ಬಜರಂಗದಳದ ಕಾರ್ಯಕರ್ತರು ಓಮ್ನಿ ವಾಹನವನ್ನು ನಿಲ್ಲಿಸಿ ಆರೋಪಿಗಳನ್ನು ಪ್ರಶ್ನಿಸಿದಾಗ ಆರೋಪಿಗಳು ಕಸಾಯಿಖಾನೆಯ ಸ್ಥಳವನ್ನು ತಿಳಿಸಿದ್ದು ಸಂಘಟನೆಗಳು ಕೂಡಲೇ ಉಡುಪಿ ಜಿಲ್ಲೆಯ ಸಂಕಲಕರಿಯ ವಧಾ ಸ್ಥಾನಕ್ಕೆ ದಾಳಿ ನಡೆಸಿ 8 ದನಗಳನ್ನು ವಶಪಡಿಸಿಕೊಂಡು ಮುಲ್ಕಿ ಮತ್ತು ಕಾರ್ಕಳ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಮುಲ್ಕಿ, ಕಾರ್ಕಳ ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

22/10/2021 08:52 pm

Cinque Terre

13 K

Cinque Terre

11

ಸಂಬಂಧಿತ ಸುದ್ದಿ