ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನದಿಗೆ ಬಿದ್ದು ನಾಪತ್ತೆಯಾಗಿದ್ದ ಇಬ್ಬರು ತರುಣರ ಶವ ಇಂದು ಪತ್ತೆ; ವಿಷಯ ಮುಚ್ಚಿಟ್ಟಿದ್ದ ಗೆಳೆಯ!

ಬ್ರಹ್ಮಾವರ: ನದಿಗೆ ಬಿದ್ದು ಕಾಣೆಯಾಗಿದ್ದ ಇಬ್ಬರು ತರುಣರ ಶವ ಇಂದು‌ ಪತ್ತೆಯಾಗಿದೆ. ಅನಾಸ್(16), ಶ್ರೇಯಸ್ (18) ಮೃತ ಪಟ್ಟವರು.

ಇವರು ಬ್ರಹ್ಮಾವರ ಠಾಣೆ ವ್ಯಾಪ್ತಿಯ ಉಗ್ಗೇಲುಬೆಟ್ಟು ಮಡಿಸಾಲು ಬಳಿ ನಿನ್ನೆ ಈಜಲು ನೀರಿಗಿಳಿದಿದ್ದರು. ಒಟ್ಟು ಮೂವರು ಈಜಲೆಂದು ನೀರಿಗೆ ಇಳಿದಿದ್ದರು. ಈ ಪೈಕಿ ಇಬ್ಬರು ನೀರುಪಾಲಾಗಿದ್ದು, ಓರ್ವ ನಿನ್ನೆಯೇ ಪಾರಾಗಿ ಬಂದು ಮನೆ ಸೇರಿದ್ದ. ಆದರೆ, ಗಾಬರಿ, ಭೀತಿಯಿಂದಾಗಿ ನೀರುಪಾಲಾದ ಇಬ್ಬರು ಗೆಳೆಯರ ಬಗ್ಗೆ ಮಾಹಿತಿ ನೀಡಿರಲಿಲ್ಲ.

ಇಬ್ಬರು ನಾಪತ್ತೆಯಾದ ಬಗ್ಗೆ ಮನೆಯವರಿಂದ ಪೊಲೀಸರಿಗೆ ದೂರು ನೀಡಿದ ಬಳಿಕ ವಿಚಾರಣೆ ವೇಳೆ ನೀರುಪಾಲಾದ ವಿಚಾರ ಬಯಲಾಗಿದೆ. ನಿನ್ನೆ ಸಂಜೆಯಿಂದ ಸ್ವರ್ಣಾ ನದಿಯಲ್ಲಿ ಈಜುಪಟು ಈಶ್ವರ್ ಅವರನ್ನು ಕರೆಸಿಕೊಂಡು ಕಾರ್ಯಾಚರಣೆ ನಡೆಸಿ

ಹುಡುಕಾಟ ನಡೆಸಲಾಯಿತು.

ಇಂದು ಬೆಳಗ್ಗೆ ಏರುಗತಿಯಲ್ಲಿ ಹರಿದ ನದಿಯಲ್ಲಿ ಇಬ್ಬರ ಶವ ಪತ್ತೆಯಾಗಿದೆ.

Edited By : Shivu K
Kshetra Samachara

Kshetra Samachara

20/10/2021 11:36 am

Cinque Terre

20.75 K

Cinque Terre

2

ಸಂಬಂಧಿತ ಸುದ್ದಿ