ಮುಲ್ಕಿ: ಶರನ್ನವರಾತ್ರಿ ಸಂಭ್ರಮ ಸಂದರ್ಭ ಇಂದು ಸಂಜೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹೊರ ಭಾಗದಲ್ಲಿ ಹುಡುಗಿಯರ ಫೋಟೊ ಕ್ಲಿಕ್ಕಿಸುತ್ತಿದ್ದ ಕೇರಳ ಮೂಲದ ವ್ಯಕ್ತಿಗೆ ಸ್ಥಳೀಯರು ಗೂಸಾ ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಯನ್ನು ಕೇರಳದ ಕಣ್ಣೂರು ನಿವಾಸಿ ಯತೀಶ್ಚಂದ್ರ ಬಾಬು(45) ಎಂದು ಗುರುತಿಸಲಾಗಿದೆ. ಆರೋಪಿ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಕಣ್ಣೂರಿನಿಂದ ಕೊಲ್ಲೂರಿಗೆ ತೆರಳಿದ್ದು, ವಾಪಸ್ ಬರುವಾಗ ಬಪ್ಪನಾಡು ಕ್ಷೇತ್ರಕ್ಕೆ ಬಂದಿದ್ದ.
ದೇವಸ್ಥಾನದ ಹೊರಗೆ ಆರೋಪಿಯು ಹುಡುಗಿಯರ ಮತ್ತು ಮಹಿಳೆಯರ ಅಂಗಾಂಗದ ಫೋಟೊ ಕ್ಲಿಕ್ಕಿಸುತ್ತಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಮಹಿಳೆಯೋರ್ವರು ಆತನನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡು ಸ್ಥಳೀಯ ಯುವಕರಿಗೆ ತಿಳಿಸಿದ್ದಾರೆ. ಕೂಡಲೇ ಯುವಕರು ಆತನಿಂದ ಮೊಬೈಲ್ ತೆಗೆದು ನೋಡಿದಾಗ ಇನ್ನೂರಕ್ಕೂ ಹೆಚ್ಚು ಮಹಿಳೆಯರ ಚಿತ್ರಗಳು ಪತ್ತೆಯಾಗಿದೆ. ಇದರಿಂದ ಆಕ್ರೋಶಗೊಂಡ ಯುವಕರು ಆತನಿಗೆ ಗೂಸಾ ಇಕ್ಕಿ ಮುಲ್ಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.
Kshetra Samachara
15/10/2021 10:41 pm