ಮಂಗಳೂರು: ಮುಸ್ಲಿಂ ವ್ಯಕ್ತಿಯ ಕಾರಲ್ಲಿ ಪರಿಚಿತ ಹಿಂದೂ ಮಹಿಳೆಯರು ಪ್ರಯಾಣಿಸಿದ್ದನ್ನು ಪ್ರಶ್ನಿಸಿ ಬಜರಂಗದಳ ಕಾರ್ಯಕರ್ತರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೈದು ಅನೈತಿಕ ಪೊಲೀಸ್‌ಗಿರಿ ನಡೆಸಿದ ಘಟನೆ ಮಂಗಳೂರು ನಗರದ ಹೊರವಲಯದ ಮೂಡುಬಿದಿರೆಯಲ್ಲಿ ನಡೆದಿದೆ.
ಈ ಘಟನೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಜರಂಗದಳದ ಸಮಿತ್ ರಾಜ್ ಮತ್ತು ಸಂದೀಪ್ ಪೂಜಾರಿ, ಬಂಧಿತರು. ಉಡುಪಿಯ ಜಿಲ್ಲೆ ಮೂಲದ ಗೀತಾ, ಮಂಜುಳಾ, ಅಶ್ರಫ್, ಪತ್ನಿ ಸೌದ ಹಲ್ಲೆಗೊಳಗಾದವರು. ಗೀತಾ ತನ್ನ ಸ್ನೇಹಿತೆ ಮಂಜುಳಾ ಎಂಬುವವರ ಜೊತೆ ತನ್ನ ಆ್ಯಕ್ಟಿವಾದಲ್ಲಿ ಮನೆಯಿಂದ ಮೂಡಬಿದ್ರೆಯ ಹನುಮಾನ್ ದೇವಸ್ಥಾನಕ್ಕೆ ಪೂಜೆಗೆಂದು ತೆರಳಿದ್ದರು. ಮಾರ್ಗ ಮಧ್ಯೆ ಸಾಣೂರು ಎಂಬಲ್ಲಿ ಗೀತಾ ಅವರ ಪರಿಚಯದ ಅಶ್ರಫ್ ಹಾಗೂ ಅವರ ಪತ್ನಿ ಸೌದ ಎದುರಾಗಿದ್ದಾರೆ.
ಆಲ್ಟೊ ಕಾರು ನಿಲ್ಲಿಸಿದ ಅಶ್ರಫ್ ಗೀತಾರ ಜತೆ ಮಾತುಕತೆ ನಡೆಸುತ್ತಾ ಗೀತಾ, ಮೂಡುಬಿದರೆಯ ಹನುಮಾನ್ ದೇವಸ್ಥಾನಕ್ಕೆ ಹೋಗುತಿರುವುದಾಗಿ ತಿಳಿಸಿದರು. ಈ ವೇಳೆ ಅಶ್ರಫ್ ತಾನು ಕೂಡ ಮೂಡಬಿದಿರೆಯ ತೋಡಾರ್ ಕಡೆಗೆ ಹೋಗುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ದುಷ್ಕರ್ಮಿಗಳ ತಂಡ ರಸ್ತೆ ಮಧ್ಯೆ ಕಾರು ನಿಲ್ಲಿಸಿ ಅನೈತಿಕ ಪೊಲೀಸ್ ಗಿರಿ ನಡೆಸಿದೆ.
Kshetra Samachara
10/10/2021 12:53 pm