ಬೆಳ್ತಂಗಡಿ: ಆಸ್ತಿಗಾಗಿ ಅಳಿಯನೇ ಮಾವನನ್ನು ಕೊಲೆಗೈದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕರಿಮಣೇಲು ಗ್ರಾಮದ ನೂಯಿ ಎಂಬಲ್ಲಿ ನಡೆದಿದೆ.
ಕೊಲೆಗೀಡಾದ ವ್ಯಕ್ತಿಯನ್ನು ಸಂಜೀವ ಶೆಟ್ಟಿ (65) ಎಂದು ಗುರುತಿಸಲಾಗಿದ್ದು, ಆರೋಪಿ ಶ್ರೀಷಾ (36) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಸಂಜೀವ ಶೆಟ್ಟಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಇವರ ಮನೆಯ ಸಮೀಪವೇ ಅಳಿಯ ಶ್ರೀಷಾ ಕೂಡ ಪ್ರತ್ಯೇಕವಾಗಿ ವಾಸವಾಗಿದ್ದ.
ಇಬ್ಬರಲ್ಲೂ ಜಾಗದ ವಿಚಾರವಾಗಿ ತಕರಾರು ಇದ್ದು, ಅಕ್ಟೋಬರ್ 7 ರಂದು ರಾತ್ರಿ ಸಂಜೀವ ಶೆಟ್ಟಿಯವರ ಮನೆಗೆ ನುಗ್ಗಿದ ಶ್ರೀಷಾ ಸಂಜೀವ ಶೆಟ್ಟಿಯವರ ಮೇಲೆ ಕತ್ತಿಯಿಂದ ಕುತ್ತಿಗೆಗೆ ಕಡಿದು ಗಂಭೀರವಾಗಿ ಗಾಯಗೊಳಿಸಿದ್ದ. ತೀವ್ರ ರಕ್ತಸ್ರಾವದಿಂದಾಗಿ ಸಂಜೀವ ಶೆಟ್ಟಿ ಆಸ್ಪತ್ರೆಗೆ ಸಾಗಿಸುವುದಕ್ಕೂ ಮೊದಲೇ ಮೃತಪಟ್ಟಿದ್ದು, ಈ ಸಂಬಂಧ ವೇಣೂರು ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
Kshetra Samachara
09/10/2021 03:17 pm