ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು ಶೂಟೌಟ್ ಪ್ರಕರಣದ ಬಾಲಕ ಬಾರದ ಲೋಕಕ್ಕೆ ಪ್ರಯಾಣ

ಮಂಗಳೂರು: ನಗರದ ಮೋರ್ಗನ್ ಗೇಟ್ಸ್ ನ ಶೂಟೌಟ್ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಸುಧೀಂದ್ರ ಪ್ರಭು ಇಂದು ಬೆಳ್ಳಂಬೆಳಗ್ಗೆ 5 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾನೆ.

ನಗರದ ಮೋರ್ಗನ್ಸ್ ಗೇಟ್ ನ ವೈಷ್ಣವಿ ಕಾರ್ಗೋ ಸಂಸ್ಥೆಯ ಮಾಲಕ ರಾಜೇಶ್ ಪ್ರಭು ಅ.5ರಂದು ಹಣದ ವಿಚಾರದಲ್ಲಿ ಕುಪಿತಗೊಂಡು ಕೆಲಸದಾಳುಗಳ ಮೇಲೆ ಶೂಟೌಟ್ ಮಾಡಲೆತ್ನಿಸಿದ್ದರು. ಆದರೆ ಅವರ ಪಿಸ್ತೂಲ್ ನಿಂದ ಹೊರಟ ಗುಂಡು ತಪ್ಪಿ ಅವರ ಮಗ ಸುಧೀಂದ್ರ ಪ್ರಭುವಿನ ತಲೆಯನ್ನು ಹೊಕ್ಕಿತ್ತು. ತಕ್ಷಣ ಆತನನ್ನು ಯುನಿಟಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತಾದರೂ ಆ ಬಳಿಕ ಆತನ ಮೆದುಳು ನಿಷ್ಕ್ರಿಯಗೊಂಡಿತ್ತು. ಇದರಿಂದ ಕುಟುಂಬಸ್ಥರು ಆತನ ಅಂಗಾಂಗ ದಾನಕ್ಕೆ ನಿರ್ಧಾರ ಮಾಡಿದ್ದರು. ಆದರೆ ಆ ಬಳಿಕ ಈ ನಿರ್ಧಾರದಿಂದ ಹಿಂದೆ ಸರಿಯಲಾಗಿತ್ತು.

ಇಂದು ಬೆಳಗ್ಗೆ ಸುಧೀಂದ್ರ ಪ್ರಭು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಆತನ ಮೃತದೇಹವನ್ನು ವೆನ್ಲಾಕ್ ಶವಾಗಾರದಲ್ಲಿ ಇರಿಸಲಾಗಿದೆ.

Edited By : Nirmala Aralikatti
Kshetra Samachara

Kshetra Samachara

08/10/2021 09:49 am

Cinque Terre

12.48 K

Cinque Terre

0

ಸಂಬಂಧಿತ ಸುದ್ದಿ