ಬಜಪೆ:ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆಯೊಬ್ಬರು ನೇಣುಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಕದಕಟ್ಟೆಯ ಸರೋಜ ಪೀಠ ಎಂಬಲ್ಲಿ ನಡೆದಿದೆ.ಅತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಪೆರಾರ ನಿವಾಸಿ ದಿ.ಆಶೋಕ್ ಅವರ ಪತ್ನಿ ಭವ್ಯಾ(34)ಎಂದು ಗುರುತಿಸಲಾಗಿದೆ.
ಆಶೋಕ್ ಆರು ತಿಂಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು.ಇದರಿಂದ ಭವ್ಯಾ ಅವರು ಮಾನಸಿಕ ಖನ್ನತೆಗೆ ಒಳಗಾಗಿದ್ದರು.ಒಂದು ವರ್ಷದ ಹಿಂದೆಯಷ್ಟೆ ಅವರ ವಿವಾಹವಾಗಿತ್ತು.ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಭವ್ಯಾ ಅವರನ್ನು ಸಂಬಂಧಿಕರು ಮುಂಬೈಗೂ ಕರೆದುಕೊಂಡು ಹೋಗಿದ್ದರು.ಅತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.ಘಟನೆಯ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
07/10/2021 09:34 pm