ಮಂಗಳೂರು:ಅನ್ಯಕೋಮಿನ ತಂಡವೊಂದು ಯುವಕನನ್ನು ಅಡ್ಡಗಟ್ಟಿ ದಾಳಿ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದ ಮರಿಕ್ಕಿನಿಯಲ್ಲಿ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ಗಿರೀಶ್ ಎಂದು ಗುರುತಿಸಲಾಗಿದೆ.
ಗಿರೀಶ್ ರವರು ರಾತ್ರಿ ಮನೆಗೆ ಹೋಗುತ್ತಿದ್ದ ವೇಳೆ ದಾರಿ ಮಧ್ಯೆ ಅಡ್ಡಗಟ್ಟಿದ ಅನ್ಯಕೋಮಿನ ತಂಡ ‘ನೀನು ಕೇಸರಿ ಶಾಲು ಹಾಕಿಕೊಂಡು ಬಾರಿ ತಿರುಗಾಟ ನಡೆಸುತ್ತಿಯಾ ಎಂದು ಗದರಿಸಿ ಹಲ್ಲೆ ನಡೆಸಿದ್ದಾರೆ. ಮಹಮ್ಮದ್, ಅಲಿ ಎಂಬುವವರ ತಂಡ ದಾಳಿ ನಡೆಸಿದೆ. ಈ ತಂಡ ದಾರಿ ಮಧ್ಯೆ ಅಡ್ಡ ಕಟ್ಟಿ ಕೇಸರಿ ಶಾಲು ಹಾಕಿದ್ದಕ್ಕೆ ಬೆದರಿಸಿ, ಯುವಕನ ಕೈಗೆ ಯಾವುದೋ ಉಪಕರಣದಿಂದ ಬಲವಾಗಿ ಚುಚ್ಚಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
Kshetra Samachara
27/09/2021 09:15 am