ಮಂಗಳೂರು : ಬೇಕರಿಗೆ ಬಂದಿದ್ದ ಯುವಕ ಕೆಲಸ ಮಾಡುತ್ತಿದ್ದ ಅನ್ಯಮತೀಯ ಮಹಿಳೆಯ ಮೈಮೇಲೆ ಕೈಹಾಕಿ ಮಾನಭಂಗಕ್ಕೆ ಯತ್ನಿಸಿದ ಘಟನೆ
ಮಂಗಳೂರಿನ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ ನಾಲ್ಕನೇ ಬ್ಲಾಕ್ ಯುವಕ ಮಂಡಲದ ಬಳಿ ನಡೆದಿದೆ. ಆರೋಪಿಯನ್ನು ಕೃಷ್ಣಾಪುರ ನಿವಾಸಿ ಮುಝಮ್ಮಿಲ್ ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ 4.30ರ ಸುಮಾರಿಗೆ ಕೃಷ್ಣಾಪುರ ಯುವಕ ಮಂಡಲ ಬಳಿಯ ಲೈವ್ ಸ್ವೀಟ್ಸ್ ಎಂಬ ಬೇಕರಿಗೆ ತನ್ನ ರಿಟ್ಜ್ ಕಾರಿನಲ್ಲಿ ಮಗಳ ಜೊತೆ ಬಂದಿದ್ದ ಆರೋಪಿ ಮುಝಮ್ಮಿಲ್ ಬೇಕರಿಯ ಒಳಗೆ ಹೋಗಿ ಮಹಿಳೆಯ ಮೈಮೇಲೆ ಕೈಹಾಕಿ ಎಳೆದಿದ್ದಾನೆ ಎಂದು ಆರೋಪಿಸಲಾಗಿದೆ.
ಈ ವೇಳೆ ಮಹಿಳೆ ಬೊಬ್ಬೆ ಹಾಕಿದ್ದು ಸ್ಥಳೀಯರು ಜಮಾಯಿಸಿ ಆರೋಪಿಯನ್ನು ಹಿಡಿಯಲು ಮುಂದಾಗಿದ್ದಾರೆ. ಆದರೆ ಅಷ್ಟರಲ್ಲಿ ಆರೋಪಿ ಕಾರನ್ನು ಬಿಟ್ಟು ಮಗಳ ಜೊತೆ ಪರಾರಿಯಾಗಿದ್ದಾನೆ. ಸಾರ್ವಜನಿಕರು ಆರೋಪಿ ಬಂದಿದ್ದ ಕಾರಿನ ಟಯರ್ ಗಾಳಿ ತೆಗೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಸುರತ್ಕಲ್ ಪೊಲೀಸರು, ಡಿಸಿಪಿ ಹರಿರಾಮ್ ಶಂಕರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
Kshetra Samachara
24/09/2021 01:29 pm