ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಪ್ಪೆಪದವು: ಆಡುಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

ಬಜಪೆ :ಮೇಯಲು ಬಿಟ್ಟ ಆಡುಗಳನ್ನು ಕಳವುಗೈಯುಲು ಹೊಂಚು ಹಾಕುತ್ತಿದ್ದ  ಖದೀಮರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕುಪ್ಪೆಪದವಿನಲ್ಲಿ ಇಂದು ನಡೆದಿದೆ.

ಕುಪ್ಪೆಪದವು ಪೇಟೆಯಲ್ಲಿ ಓರ್ವ ಬಾಲಕ ಮತ್ತು ಬಾಲಕಿ ಅನುಮಾನಾಸ್ಪದವಾದ ರೀತಿಯಲ್ಲಿ ತಿರುಗಾಡುತ್ತಿದ್ದನ್ನು ಗಮನಿಸಿದ ಸಾರ್ವಜನಿಕರು,ಅವರನ್ನು ಪ್ರಶ್ನಿಸಿದಾಗ ಅವರು ಅಸಮರ್ಪಕ ಉತ್ತರ ನೀಡಿದ್ದಾರೆ.ಇದರಿಂದ ಕೆರಳಿದ ಸಾರ್ವಜನಿಕರು ಗೂಸಾ ಕೂಡಾ ನೀಡಿದ್ದಾರೆ.ಸಾರ್ವಜನಿಕರಿಗೆ ಹೆದರಿದ ಇವರು ಸತ್ಯ ಬಾಯ್ಬಿಟ್ಟಿದ್ದಾರೆ.ತಂಡದಲ್ಲಿ ಒಟ್ಟು 5 ಜನರಿದ್ದು,ಒಂದೇ ಕುಟುಂಬದವರಾಗಿದ್ದಾರೆ. ಮೂಲತಃ ಭದ್ರಾವತಿಯವರಾಗಿದ್ದು,ಕಳ್ಳತನ ಮಾಡುವುದೇ ಇವರ ಜೀವನವಾಗಿದೆ.ಕಳ್ಳತನಕ್ಕೆ ಬಳಸುತ್ತಿದ್ದ 800 ಕಾರು ಕುಪ್ಪೆಪದವು ಸಮೀಪ ಪತ್ತೆಯಾಗಿದ್ದು, ಆಡುಗಳನ್ನು ಕದ್ದೊಯ್ಯಲು ಬಳಸುತ್ತಿದ್ದ ಹಗ್ಗ ಮತ್ತಿತರರ ಸೊತ್ತುಗಳು ಕಾರಿನಲ್ಲಿ ಪತ್ತೆಯಾಗಿವೆ.

ಕಳವಿಗೆ ಬಳಸುತ್ತಿದ್ದ 800 ಕಾರು ಹಾಗೂ ಆಡು ಕಳ್ಳರನ್ನು ಬಜಪೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

23/09/2021 11:10 pm

Cinque Terre

20.55 K

Cinque Terre

1

ಸಂಬಂಧಿತ ಸುದ್ದಿ