ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರವಾನಿಗೆ ಇಲ್ಲದೆ ಪಟಾಕಿ ದಾಸ್ತಾನಿರಿಸಿದ ಸ್ಥಳಕ್ಕೆ ದಾಳಿ: ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

ಮಂಗಳೂರು: ಪಟಾಕಿ ತಯಾರಿಕಾ ಸಾಮಾಗ್ರಿಗಳನ್ನು ಯಾವುದೇ ಪರವಾನಿಗೆ ಇಲ್ಲದೆ ದಾಸ್ತಾನು ಇರುವ ಸ್ಥಳಕ್ಕೆ ದಾಳಿ ನಡೆಸಿರುವ ಸುರತ್ಕಲ್ ಪೊಲೀಸರು ಇಬ್ಬರು ಆರೋಪಿಗಳ ಸಹಿತ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕುಳಾಯಿ ಗ್ರಾಮದ ವಿದ್ಯಾನಗರ ನಿವಾಸಿಗಳಾದ ಗಂಗಾಧರ್(53), ಯಾದವ ಬಿ.ಎಂ.(48) ಬಂಧಿತ ಆರೋಪಿಗಳು.

ನಗರದ ಕುಳಾಯಿ ಗ್ರಾಮದ ವಿದ್ಯಾನಗರ ಎಂಬಲ್ಲಿನ ಶೆಡ್ ಒಂದರಲ್ಲಿ ಅಕ್ರಮವಾಗಿ ಪಟಾಕಿ ತಯಾರಿ ಸಾಮಾಗ್ರಿಗಳನ್ನು ದಾಸ್ತಾನು ಇರಿಸಲಾಗಿತ್ತು. ಬಂಧಿತ ಆರೋಪಿಗಳು ಅಣ್ಣ-ತಮ್ಮಂದಿರಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಪಟಾಕಿ ತಯಾರಿಕಾ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಸ್ಪೋಟಕ ರಾಸಾಯನಿಕವಾಗಿ ವಸ್ತುಗಳನ್ನು ದಾಸ್ತಾನು ಇರಿಸಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಸುರತ್ಕಲ್ ಪೊಲೀಸರು ದಾಳಿ‌ ನಡೆಸಿ 600 ಗ್ರಾಂ ಅಲ್ಯೂಮಿನಿಯಂ ಬೀಡ್ ಗಳು, 9ಕೆಜಿ ಚಾರ್ ಕೋಲ್, 10 ಕೆಜಿ ಗನ್ ಪೌಡರ್, 2ಕೆಜಿ ಗಂಧಕದ ಪೌಡರ್, 11 ಕೆಜಿ ಸೆಣಬಿನ ಹುರಿ, ಸಣ್ಣ ಪೇಪರ್ ಗಳು, ಸರಿಗೆ ತಂತಿ, ವೃತ್ತಾಕಾರದ ಮರದ ಕೋಲು, ಕಬ್ಬಿಣದ ಚೂಪಾದ ಕೋಲು ಸ್ವಾಧೀನ ಪಡಿಸಿಕೊಂಡಿದ್ದಾರೆ. ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Edited By : Nirmala Aralikatti
Kshetra Samachara

Kshetra Samachara

18/09/2021 08:22 pm

Cinque Terre

12.27 K

Cinque Terre

0

ಸಂಬಂಧಿತ ಸುದ್ದಿ