ಬಂಟ್ವಾಳ: ಬಂಟ್ವಾಳ ಪುರಸಭೆ ವ್ಯಾಪ್ತಿಯ ಲೊರೆಟ್ಟೊ ಸಮೀಪ ಬಾರೆಕಾಡು ಎಂಬಲ್ಲಿ ಕಲ್ಲಿನ ಕ್ವಾರಿಗೆ ಆಟವಾಡಲು ತೆರಳಿದ ಬಾಲಕ ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ನಡೆದಿದೆ.
ಬಂಟ್ವಾಳ ಕಸ್ಬಾ ಗ್ರಾಮದ ಬಾರೆಕಾಡು ಕ್ವಾರ್ಟರ್ಸ್ ನಿವಾಸಿ ಮಹಮ್ಮದ್ ಸಾದೀಕ್ ಎಂಬವರ ಪುತ್ರ ಮಹಮ್ಮದ್ ಸೌಹಾದ್ (12) ಮೃತ ಬಾಲಕ. ಬಾಲಕ ಮಹಮ್ಮದ್ ಲೊರೆಟ್ಟೊ ಚರ್ಚ್ ಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿಯಾಗಿದ್ದು, ಆರನೇ ತರಗತಿಯಲ್ಲಿ ಕಲಿಯುತ್ತಿದ್ದ. ಮೂಲತಃ ಬಿ.ಸಿ.ರೋಡಿನ ಪರ್ಲಿಯಾದವರಾಗಿರುವ ಸಾದೀಕ್ ಅವರು ಕೆಲಸದ ನಿಮಿತ್ತ ಬಾರೆಕಾಡಿನಲ್ಲಿ ವಾಸ್ತವ್ಯ ಹೂಡಿದ್ದರು. ಶಾಲೆ ಇಲ್ಲದ ಹಿನ್ನೆಲೆಯಲ್ಲಿ ಖಾಸಗಿ ಜಾಗದಲ್ಲಿದ್ದ ಕಲ್ಲಿನ ಕ್ವಾರೆ ಬಳಿ ಆಟವಾಡಲು ಬಾಲಕ ತನ್ನಿಬ್ಬರು ಸ್ನೇಹಿತರೊಂದಿಗೆ ತೆರಳಿದ್ದ. ಈ ಸಂದರ್ಭ ಆಯತಪ್ಪಿ ಬಿದ್ದಿದ್ದಾನೆ.
ಬಾಲಕ ಬಿದ್ದಿದ್ದನ್ನು ಗಮನಿಸಿದ ಉಳಿದವರಿಬ್ಬರೂ ಸ್ಥಳೀಯರಿಗೆ ವಿಷಯ ಮುಟ್ಟಿಸಿದ್ದಾರೆ. ಬಾಲಕನನ್ನು ಮೇಲಕ್ಕೆತ್ತಿ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾನೆ.
Kshetra Samachara
04/09/2021 08:05 pm