ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಮನ್‌ನಲ್ಲಿ ಸಮುದ್ರ‌ ವಿಹಾರಕ್ಕೆ ತೆರಳಿದ ಉಳ್ಳಾಲದ ಯುವಕರಿಬ್ಬರು ಮೃತ್ಯು

ಮಂಗಳೂರು: ಓಮನ್ ನಲ್ಲಿ ಸಮುದ್ರ ವಿಹಾರಕ್ಕೆಂದು ತೆರಳಿದ ಉಳ್ಳಾಲದ ಯುವಕರಿಬ್ಬರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ನಿನ್ನೆ ನಡೆದಿದೆ. ಉಳ್ಳಾಲದ ರಿಜ್ವಾನ್ ಅಲೆಕಳ (25), ಉಳ್ಳಾಲ ಕೋಡಿಯ ಜಹೀರ್ (25) ಮೃತಪಟ್ಟವರು.

ಎರಡು ವರ್ಷಗಳ ಹಿಂದೆ ಓಮನ್ ಗೆ ತೆರಳಿದ್ದ ರಿಜ್ವಾನ್ ಹಾಗೂ ಜಹೀರ್ ಫಿಶ್ ಮಿಲ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು. ಇವರಿಬ್ಬರೂ ಶುಕ್ರವಾರ ಸಂಜೆ ಒಮನ್‌ನ ದುಕ್ಕುಂ ಎಂಬಲ್ಲಿನ ಕಡಲತೀರಕ್ಕೆ ತೆರಳಿದ್ದರು.‌ ಈ‌ ಸಂದರ್ಭ ಸಮುದ್ರಕ್ಕಿಳಿದ ರಿಜ್ವಾನ್ ಸಮುದ್ರದ ಅಲೆಗೆ ಸಿಲುಕಿದ್ದಾರೆ. ಆಗ ಜಹೀರ್ ಅವರನ್ನು ಉಳಿಸಲು ಈಜುತ್ತಾ ತೆರಳಿ, ರಕ್ಷಿಸಿ ದಡಕ್ಕೆ ತರುವ ಪ್ರಯತ್ನದಲ್ಲಿದ್ದರು‌. ಈ ವೇಳೆ ಸಾವಿನ ಭಯದಲ್ಲಿ ರಿಜ್ವಾನ್‌, ಜಹೀರ್‌ನ ಕುತ್ತಿಗೆಗೆ ಕೈ ಹಾಕಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿದ ಜಹೀರ್ ಕೂಡ ಸಮುದ್ರಪಾಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈಗಾಗಲೇ ಜಹೀರ್ ಮೃತದೇಹ ಪತ್ತೆಯಾಗಿದ್ದು, ರಿಜ್ವಾನ್‌ಗಾಗಿ ಹುಡುಕಾಟ ಮುಂದುವರಿದಿದೆ. ಒಮನ್ ನಲ್ಲಿ ಇಂಡಿಯನ್ ಸೋಶೀಯಲ್ ಫೋರಮ್ ಮೃತದೇಹದ ಹುಡುಕಾಟದಲ್ಲಿ ಕೈಜೋಡಿಸಿತ್ತು. ಇದೀಗ ರಿಜ್ವಾನ್ ಮೃತದೇಹದ ಹುಡುಕಾಟದಲ್ಲಿಯೂ ಪ್ರಯತ್ನದಲ್ಲಿದೆ. ಮೃತ ಜಹೀರ್ ತಾಯಿ ಅಲ್ಲಿಯೇ ದಫನ್ ಮಾಡಲು ಒಪ್ಪಿಗೆ ನೀಡಿರುವುದರಿಂದ ಓಮನ್ ನಲ್ಲಿಯೇ ಅಂತ್ಯಕ್ರಿಯೆ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Edited By : Nagaraj Tulugeri
Kshetra Samachara

Kshetra Samachara

28/08/2021 03:10 pm

Cinque Terre

15.93 K

Cinque Terre

0

ಸಂಬಂಧಿತ ಸುದ್ದಿ