ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುಂಜಾಲಕಟ್ಟೆಯಲ್ಲಿ ಬೈಕ್ ಅಡ್ಡಗಟ್ಟಿ ಹಲ್ಲೆ: ಮೂವರು ವಶಕ್ಕೆ

ಬಂಟ್ವಾಳ: ಪುಂಜಾಲಕಟ್ಟೆ ಎಂಬಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ತಡೆದು ಹಲ್ಲೆ ನಡೆಸಲಾಗಿದೆ ಎಂದು ಕಿರಣ್ ಕುಮಾರ್ ಎಂಬವರು ನೀಡಿದ ದೂರಿನನ್ವಯ ಮೂವರನ್ನು ಪುಂಜಾಲಕಟ್ಟೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಿರಣ್ ಕುಮಾರ್ ತನ್ನ ಮನೆಯಿಂದ ಕುಕ್ಕಳ ಗ್ರಾಮದ ಮಂಜಲಪಲ್ಕೆ ಎಂಬಲ್ಲಿರುವ ತನ್ನ ಗೆಳೆಯನ ಮನೆಗೆ ಬೈಕ್‌ನಲ್ಲಿ ರಾತ್ರಿ 8:15 ಗಂಟೆಗೆ ಹೋಗುತ್ತಿದ್ದರು. ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆ ಪೇಟೆಗೆ ತಲುಪಿದಾಗ ಸುಮಾರು 8-10 ಮಂದಿ ಅಪರಿಚಿತರು ತಡೆದಿದ್ದಾರೆ. ಅಷ್ಟೇ ಅಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಬೈಕ್ ದೂಡಿದ್ದಾರೆ. ಕಿರಣ್ ಅವರನ್ನು ಕೆಳಗೆ ಬೀಳಿಸಿದ್ದಲ್ಲದೆ ಅವರ ಪೈಕಿ ಒಬ್ಬಾತನು ತಲೆಗೆ ಕಲ್ಲಿನಿಂದ ಹೊಡೆದ ಪರಿಣಾಮ ತಲೆಗೆ ಗಾಯವಾಗಿರುತ್ತದೆ ಎಂದು ದೂರಿನಲ್ಲಿ ತಿಳಿಸಿದನ್ವಯ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Edited By : Vijay Kumar
Kshetra Samachara

Kshetra Samachara

27/08/2021 09:48 am

Cinque Terre

12.51 K

Cinque Terre

0

ಸಂಬಂಧಿತ ಸುದ್ದಿ