ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಕ್ಕಾರು: ಅರಸುಲೆ ಪದವು ಬಳಿ ಚಿರತೆ ದಾಳಿಗೆ ಬಲಿಯಾದ ಕರು

ಮುಲ್ಕಿ: ಕಟೀಲು ಸಮೀಪದ ಎಕ್ಕಾರು ಅರಸುಲ ಪದವು ಬಳಿ ಮೇಯಲು ಬಿಟ್ಟ ಕರು ಚಿರತೆಗೆ ಬಲಿಯಾದ ದಾರುಣ ಘಟನೆ ನಡೆದಿದೆ.

ಎಕ್ಕಾರು ಅರಸುಲ ಪದವು ನಿವಾಸಿ ಆಂಡ್ರ್ಯೂ ಮಿಸ್ಕಿತ್ ಎಂಬವರ ಎರಡು ವರ್ಷ ಪ್ರಾಯದ ಗಂಡು ಕರು ಶನಿವಾರ ಮೇಯಲು ಹೋಗಿದ್ದು ಬಂದಿರಲಿಲ್ಲ. ಭಾನುವಾರ ಎಕ್ಕಾರಿನ ಯುವಕರು ಅರಸುಲ ಪದವು ಮುಂಡೇವುದಬಲ್ಲೆ ಬಳಿಯಲ್ಲಿ ಹೋಗುತ್ತಿದ್ದಾಗ ಅರ್ಧಂಬರ್ಧ ತಿಂದು ಹಾಕಿದ ಸ್ಥಿತಿಯಲ್ಲಿ ಕರು ಪತ್ತೆಯಾಗಿದೆ. ಕಟೀಲು ಎಕ್ಕಾರು ಲಯನ್ಸ್ ಕ್ಲಬ್ ನ ಸ್ಟ್ಯಾನಿ ಪಿಂಟೋ ನೇತೃತ್ವದಲ್ಲಿ ಕರುವನ್ನು ದಫನ ಮಾಡಲಾಗಿದೆ. ಚಿರತೆ ದಾಳಿಯಿಂದ ಕರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು ಸ್ಥಳೀಯರು ಭಯಭೀತರಾಗಿದ್ದಾರೆ.

ಕಳೆದ ತಿಂಗಳ ಹಿಂದೆ ಇದೇ ಪರಿಸರದ ಕೆಲವು ನಾಯಿಗಳು ಕೂಡ ಕಾಣೆಯಾಗಿದ್ದು ಚಿರತೆ ತಿಂದಿರ ಬಹುದೆಂದು ಶಂಕಿಸಲಾಗಿದೆ. ಕಳೆದ ಒಂದುವರೆ ವರ್ಷದ ಹಿಂದೆ ಕಟೀಲು ಎಕ್ಕಾರು ಲಯನ್ಸ್ ಕ್ಲಬ್‌ನ ಸ್ಟ್ಯಾನಿ ಪಿಂಟೋ ರವರ ಮನೆಯ ಅಂಗಳಕ್ಕೆ ಚಿರತೆ ಬಂದು ನಾಯಿಯನ್ನು ಎಳೆದುಕೊಂಡು ಹೋದದ್ದು ಸಿಸಿ ಟಿವಿಯಲ್ಲಿ ದಾಖಲಾಗಿತ್ತು. ಬಳಿಕ ಎಕ್ಕಾರಿನ ಮತ್ತೋರ್ವರ ಮನೆಯ ಹಟ್ಟಿಗೆ ಬಂದು ದನವನ್ನು ಎಳೆದೊಯ್ಯಲು ಪ್ರಯತ್ನಿಸಿದಾಗ ಮನೆಯವರ ಬೊಬ್ಬೆಗೆ ಚಿರತೆ ಓಡಿಹೋಗಿತ್ತು.

ಅರಸಲು ಪದವಿನಲ್ಲಿ ಸಾಕಷ್ಟು ಕಲ್ಲುಕೋರೆಗಳಿದ್ದು ಕಾರ್ಮಿಕರೂ ವಾಸಿಸುತ್ತಿದ್ದಾರೆ. ಅರಣ್ಯ ಇಲಾಖೆಯವರು ಚಿರತೆ ಹಿಡಿಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆನ್ನುವುದು ಸ್ಥಳೀಯರು ಒತ್ತಾಯಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

08/08/2021 11:24 pm

Cinque Terre

21.37 K

Cinque Terre

0

ಸಂಬಂಧಿತ ಸುದ್ದಿ