ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರೋಡ್ ನಲ್ಲಿ ವಾಹನ ಪಾರ್ಕ್ ಮಾಡಿ ಕಿರಿಕ್ ಮಾಡಿ ಪೊಲೀಸ್ ಅತಿಥಿಯಾದ

ಮಂಗಳೂರು: ನಗರದ ಕಂಕನಾಡಿ ಬಳಿ ರೋಡ್ ನಲ್ಲಿ ವಾಹನವನ್ನು ಪಾರ್ಕ್ ಮಾಡಿ ಪೊಲೀಸರೊಂದಿಗೆ ಉಡಾಫೆಯಿಂದ ವರ್ತಿಸಿದಾತನನ್ನು ಮಂಗಳೂರು ಸಂಚಾರಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಪೊಲೀಸರೊಂದಿಗೆ ಉಡಾಫೆಯಿಂದ ವರ್ತಿಸಿದ ಆತ 'ಮೊದಲು ರೋಡ್ ಸರಿ ಮಾಡಿ, ಅದು ಬಿಟ್ಟು ನಾವು ತಲೆಯಲ್ಲಿ ಪಾರ್ಕ್ ಮಾಡಬೇಕಾ, ಎಂದಿರುವ ಆತ ರಸ್ತೆಯನ್ನೇ ಪಾರ್ಕಿಂಗ್ ಸ್ಥಳ ಎಂದಿದ್ದಾನೆ. ಆಗ ಪೊಲೀಸರು ಈ ಬಗ್ಗೆ ಪೊಲೀಸ್ ಕಮಿಷನರ್ ನೊಂದಿಗೆ ಮಾತನಾಡಿ ಎಂದಿದ್ದಾರೆ. ಕಮಿಷನರ್ ನಲ್ಲಿ ಮಾತನಾಡುವೆ ಎಂದು ಪೊಲೀಸರ ಜೊತೆಗೆ ಒರಟಾಗಿ ವರ್ತಿಸಿದ್ದಾನೆ‌.

ಬಳಿಕ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು, ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

06/08/2021 10:16 pm

Cinque Terre

33.96 K

Cinque Terre

10

ಸಂಬಂಧಿತ ಸುದ್ದಿ