ಮಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಿಕ್ಷಕಿಯೋರ್ವರ ಚಿನ್ನದ ಕರಿಮಣಿ ಸರವನ್ನು ಎಳೆದೊಯ್ದ ಪರಾರಿಯಾಗಿದ್ದ ಆರೋಪಿಯನ್ನು ಸುರತ್ಕಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ದುರ್ಗದಬೆಟ್ಟು, ಶಾಂತಿಪುರ ಕೊಪ್ಪ ನಿವಾಸಿ ಕೆ.ಎಸ್.ಶ್ರೇಯಸ್(24) ಬಂಧಿತ ಆರೋಪಿ.
ಸುರತ್ಕಲ್ ವಿದ್ಯಾದಾಯಿನಿ ಪ್ರೌಢಶಾಲೆಯ ಶಿಕ್ಷಕಿ ವಿದ್ಯಾ ಎಂಬವರು ಆಗಸ್ಟ್ 4ರಂದು ಸುರತ್ಕಲ್ ನಲ್ಲಿರುವ ತಮ್ಮ ಮನೆಯಿಂದ ಶಾಲೆಯ ಕಡೆಗೆ ನಡೆದುಕೊಂಡು ಬರುತ್ತಿದ್ದರು. ದಾರಿ ಮಧ್ಯೆ ಅಂಡರ್ ಪಾಸ್ ಬಳಿ ಬರುತ್ತಿರುವಾಗ ಮಧ್ಯಾಹ್ನ 1.10 ಸುಮಾರಿಗೆ ಏಕಾಏಕಿ ಬಂದಿರುವ ಆರೋಪಿ ಕೆ.ಎಸ್.ಶ್ರೇಯಸ್ ವಿದ್ಯಾ ಅವರ ಕತ್ತಿನಲ್ಲಿದ್ದ 2 ಪವನ್ ಚಿನ್ನದ ಕರಿಮಣಿ ಸರವನ್ನು ಎಳೆದೊಯ್ದು ಪರಾರಿಯಾಗಿದ್ದ. ಈ ಬಗ್ಗೆ ವಿದ್ಯಾ ಅವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರು ಅನುಮಾನದ ಮೇಲೆ ಕೆ.ಎಸ್.ಶ್ರೇಯಸ್ ವಶಪಡಿಸಿಕೊಂಡು ವಿಚಾರಣೆ ನಡೆಸಿದಾಗ ಆತನಲ್ಲಿ ಕರಿಮಣಿ ಸರ ಪತ್ತೆಯಾಗಿದೆ. ತಕ್ಷಣ ಪೊಲೀಸರು ಆತನನ್ನು ವಶಪಡಿಸಿಕೊಂಡಿದ್ದಾರೆ. ಕೆ.ಎಸ್.ಶ್ರೇಯಸ್ ಸದ್ಯ ನಿರುದ್ಯೋಗಿಯಾಗಿದ್ದ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Kshetra Samachara
04/08/2021 10:31 pm