ಮಂಗಳೂರು: ನಗರದ ಕೂಳೂರಿನ ರಾಯಿಕಟ್ಟೆಯಲ್ಲಿನ ಮನೆಯೊಂದಕ್ಕೆ ಅಕ್ರಮವಾಗಿ ನುಗ್ಗಿದ ದುಷ್ಕರ್ಮಿಗಳಿಬ್ಬರು ಪುತ್ರನಿಗೆ ಹಲ್ಲೆಗೈದು, ತಾಯಿ-ಮಗಳಿಗೆ ಜೀವ ಬೆದರಿಕೆ ಒಡ್ಡಿರುವ ಕುರಿತು ಮಹಿಳಾ (ಪಾಂಡೇಶ್ವರ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.29ರಂದು ರಾತ್ರಿ 7:30ಕ್ಕೆ ರಾಯಿಕಟ್ಟೆಯ 3ನೇ ಕ್ರಾಸ್‌ನ ರಾಜೇಶ್ವರಿ ಎಂಬವರ ಮನೆಗೆ ಅವರ ನೆರೆಮನೆಯ ದೀಪಕ್ ರೈ ಮತ್ತು ಕೋಡಿಯಂ ಎಂಬಿಬ್ಬರು ಆರೋಪಿಗಳು ಅಕ್ರಮವಾಗಿ ನುಗ್ಗಿದ್ದಾರೆ. ಅವರು ಮನೆಯಲ್ಲಿದ್ದ ವಸ್ತುಗಳನ್ನು ನಾಶ ಮಾಡಿದ್ದಲ್ಲದೆ ರಾಜೇಶ್ವರಿ ಅವರಿಗೆ ತಲೆಗೆ ಕಲ್ಲು ಎತ್ತಿ ಹಾಕಿದ್ದಾರೆ. ಆದರೆ ಆ ಕಲ್ಲು ಅವರ ಪುತ್ರ ದುಶಾಂತ್ ರೈ ಎಂಬವರಿಗೆ ತಗುಲಿದೆ. ಅವರೀಗ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಆರೋಪಿಗಳು ರಾಜೇಶ್ವರಿಗೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಅವರ ಪುತ್ರಿ ದೀಕ್ಷಾರನ್ನು ಅಪಹರಿಸಿ, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆಂದು ಮಹಿಳಾ (ಪಾಂಡೇಶ್ವರ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
30/07/2021 09:57 pm