ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ತಂಗಿಯ ಚಿನ್ನಾಭರಣದೊಂದಿಗೆ ಅಕ್ಕ ಪರಾರಿ- ದೂರು ದಾಖಲು

ಮಂಗಳೂರು: ತಮ್ಮದೇ ಮನೆಯ ಕಪಾಟಿನಲ್ಲಿರಿಸಿದ್ದ ಇತ್ತೀಚಿಗೆ ತಾನೇ ವಿವಾಹವಾಗಿದ್ದ ತಂಗಿಯ ಒಡವೆಗಳನ್ನು ಅಪಹರಿಸಿ ಅಕ್ಕ ಪರಾರಿಯಾಗಿದ್ದಾಳೆ. ಆಕೆಯನ್ನು ಹುಡುಕಿ ಕೊಡಿ ಎಂದು ತಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸುರತ್ಕಲ್ ಠಾಣಾ ವ್ಯಾಪ್ತಿಯ ನಿವಾಸಿ ಇಬ್ರಾಹಿಂ ಅವರ ಹಿರಿಯ ಮಗಳು ರಿಜ್ವಾನಾ(25) ಶಿಕ್ಷಕಿಯಾಗಿದ್ದು, ಗಂಡ ದುಬೈನಲ್ಲಿರುವ ಕಾರಣ ತಂದೆಯ ಮನೆಯಲ್ಲಿಯೇ ಉಳಿದುಕೊಂಡಿದ್ದಳು. ರಿಜ್ವಾನಾ ತಂಗಿ ರಾಝ್ವಿನಾಳಿಗೆ ಮಾರ್ಚ್ ತಿಂಗಳಿನಲ್ಲಿ ಮದುವೆಯಾಗಿದ್ದು, ಆಕೆಯ ಒಡವೆಗಳು ತಂದೆಯ ಮನೆಯಲ್ಲಿಯೇ ಇತ್ತು. ಒಡವೆಗಳಿದ್ದ ಕಪಾಟಿನ ಕೀ ಹಿರಿಯ ಮಗಳಾದ ರಿಜ್ವಾನಾಳ ಬಳಿ ಇತ್ತು. ಹಣದ ಅವಶ್ಯಕತೆ ಇದ್ದ ಕಾರಣ ಒಡವೆಗಳನ್ನು ಅಡವಿರಿಸಲು ಜುಲೈ 26ರಂದು ಬೆಳಗ್ಗೆ ಕಪಾಟಿನ ಕೀಯನ್ನು ಇಬ್ರಾಹಿಂ ಅವರು ಕೇಳಿದಾಗ ರಿಜ್ವಾನಾಳು ಕೊಡಲು ನಿರಾಕರಿಸಿದ್ದಾಳೆ.

ಅದೇ ದಿನ ಆಕೆ ಶಿಕ್ಷಕಿಯಾಗಿದ್ದ ಚೊಕ್ಕಬೆಟ್ಟುವಿನ ಜಾಮೀಯಾ ಇಂಗ್ಲೀಷ್ ಮೀಡಿಯಂ ಶಾಲೆಗೆ ಎಂದು ಹೇಳಿ ಹೋದವಳು ವಾಪಾಸ್ ಮನೆಗೆ ಬಾರದೇ ನಾಪತ್ತೆಯಾಗಿದ್ದಳು. ಅಲ್ಲದೆ ಆಕೆಯ ಮೊಬೈಲ್ ಪೋನ್ ಕೂಡಾ ಸ್ವಿಚ್ ಆಫ್ ಆಗಿತ್ತು‌. ಮರುದಿನ ಕಪಾಟಿನ ಬಾಗಿಲು ಒಡೆದು ನೋಡಿದಾಗ ಅದರಲ್ಲಿ ಒಡವೆಗಳು ಇರಲಿಲ್ಲ. ರಿಜ್ವಾನಾಳಿಗೆ ಕೃಷ್ಣಾಪುರದ ಬಶೀರ್ ಎಂಬಾತನೊಂದಿಗೆ ಪ್ರೀತಿಯಿದ್ದು, ಆತನೊಂದಿಗೆ ಒಡವೆ ಜೊತೆಯಲ್ಲಿ ಪರಾರಿಯಾಗಿದ್ದಾಳೆ ಎಂದು ಆಕೆಯ ತಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

30/07/2021 10:33 am

Cinque Terre

20.64 K

Cinque Terre

0

ಸಂಬಂಧಿತ ಸುದ್ದಿ