ಮಂಗಳೂರು: ಎಟಿಎಂನಲ್ಲಿ ಸ್ಕಿಮ್ಮಿಂಗ್ ಉಪಕರಣಗಳನ್ನಿಟ್ಟು ಹ್ಯಾಕ್ ಮಾಡಿ ಹಣ ಎಗರಿಸಲು ಯತ್ನಿಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸ್ ವಶಕ್ಕೆ ಒಪ್ಪಿಸಿರುವ ಘಟನೆ ಮಂಗಳೂರಿನ ಮಂಗಳಾದೇವಿಯಲ್ಲಿ ನಡೆದಿದೆ.
ಎಟಿಎಂನಲ್ಲಿ ಇಬ್ಬರು ಸ್ಕಿಮ್ಮಿಂಗ್ ಉಪಕರಣ ಇಡುತ್ತಿರುವ ಬಗ್ಗೆ ಸಂಶಯಗೊಂಡ ಸ್ಥಳೀಯರು ಅವರನ್ನು ಓಡಿಸಿ ಸೆರೆ ಹಿಡಿದಿದ್ದಾರೆ.
ಈ ಕಾರ್ಯಾಚರಣೆಯ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Kshetra Samachara
23/02/2021 12:46 pm