ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವಿಮಾನ ನಿಲ್ದಾಣದಲ್ಲಿ ಟ್ರಾಲಿ ಬ್ಯಾಗ್ ಚಕ್ರ, ಆಟಿಕೆಯಲ್ಲಿ ಚಿನ್ನ ಸಾಗಾಟ: ಓರ್ವ ಸೆರೆ

ಮಂಗಳೂರು: ಆಟಿಕೆ ಹಾಗೂ ಟ್ರಾಲಿ ಬ್ಯಾಗ್ ಚಕ್ರದೊಳಗೆ ಅಡಗಿಸಿ ಚಿನ್ನ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು, ಒಬ್ಬನನ್ನು ಬಂಧಿಸಿ 19,01,460 ರೂ. ಮೌಲ್ಯದ ಚಿನ್ನವನ್ನು ವಶ ಪಡಿಸಿದ್ದಾರೆ.

ಕಾಸರಗೋಡಿನ ಶೇಕ್ ಹನೀಫ್ (26) ಬಂಧಿತನಾಗಿದ್ದು, ಈತ ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬಂದಿಳಿದಿದ್ದ. ಕಸ್ಟಮ್ಸ್ ಅಧಿಕಾರಿಗಳು ಈತನನ್ನು ತಪಾಸಣೆ ನಡೆಸಿದಾಗ ಈತ ಟ್ರಾಲಿ ಬ್ಯಾಗ್​ನ ಚಕ್ರದಲ್ಲಿ ಮತ್ತು ವ್ಯಾಕ್ಯೂಮ್ ಕ್ಲೀನರ್ ಆಟಿಕೆಯ ಮೋಟಾರ್ ಪ್ಲೇಟ್​ನಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಪತ್ತೆಯಾಗಿದೆ.

ಈ ಸಂದರ್ಭ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯಿಂದ 402 ಗ್ರಾಂ‌ ತೂಕದ 19,01,460 ಮೌಲ್ಯದ ಚಿನ್ನ ವಶಪಡಿಸಿಕೊಂಡು, ಬಂಧಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

20/02/2021 11:25 am

Cinque Terre

21.24 K

Cinque Terre

1

ಸಂಬಂಧಿತ ಸುದ್ದಿ