ಬೈಂದೂರು: ಬೈಂದೂರಿನ ಮೂಲಕ ಕಾಸರಗೋಡಿನತ್ತ ಅಕ್ರಮ ಗೋ ಕಳ್ಳಸಾಗಣೆ ಕೆಲವು ದಿನಗಳಿಂದ ನಡೆಯುತ್ತಿದ್ದ ಬಗ್ಗೆ ಅಧಿಕೃತ ಮಾಹಿತಿಯ ಹಿನ್ನೆಲೆಯಲ್ಲಿ ಬೈಂದೂರು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ತ್ರಾಸಿ, ಮರವಂತೆ ಸಮುದ್ರ ಕಿನಾರೆ ಸಮೀಪ ವಾಹನವನ್ನು ಅಡ್ಡಗಟ್ಟಿ 16 ಜಾನುವಾರುಗಳ ರಕ್ಷಣೆ ಮಾಡಲಾಯಿತು ಹಾಗೂ ಲಾರಿಯಲ್ಲಿದ್ದ ಹಾಸನ ಮೂಲದ ನಜರುಲ್, ಮೈಸೂರು ಮೂಲದ ರಾಘವೇಂದ್ರ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಲಾರಿಯಲ್ಲಿದ್ದ 18 ಜಾನುವಾರುಗಳಲ್ಲಿ ಎರಡು ಜಾನುವಾರುಗಳು ಸಾಗಾಟದ ವೇಳೆ ಸಾವನ್ನಪ್ಪಿದೆ. ಅಕ್ರಮ ಗೋ ಸಾಗಾಟದ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
12/02/2021 03:43 pm