ಕೋಟ: ಕಳೆದ ಸೋಮವಾರ ಕೋಟ ಹೈಸ್ಕೂಲ್ ಬಳಿ ಪ್ರಶಾಂತ್ ಅವರ ಮೇಲೆ ಕೋಟ ಆರಕ್ಷಕರು ದರ್ಪ, ದೌರ್ಜನ್ಯ ತೋರಿದ್ದಾರೆ ಎಂದು ಆರೋಪಿಸಿ ಕೋಟದ ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ ನೇತೃತ್ವದಲ್ಲಿ ಸಾಲಿಗ್ರಾಮದಿಂದ ಕೋಟ ಹೈಸ್ಕೂಲ್ ಬಳಿ ವರೆಗೆ ಕಾಲ್ನಡಿಗೆ ಮೂಲಕ ಪ್ರತಿಭಟನೆ ಜಾಥಾ ಜರುಗಿತು.
ಈ ಸಂದರ್ಭ ಮಾತನಾಡಿದ ದಿನೇಶ್ ಗಾಣಿಗ ಅವರು, ಪೊಲೀಸ್ ಇಲಾಖೆ ಇರುವುದು ಜನರ ನಡುವೆ ಸೇತುವೆಯಾಗಿಕಾರ್ಯನಿರ್ವಹಿಸಲು ವಿನಹ ಮನಬಂದಂತೆ ಕಾರ್ಯ ನಿರ್ವಹಿಸಲು ಅಲ್ಲ. ಕಂಡಕಂಡಲ್ಲಿ ಅಡ್ಡಗಟ್ಟಿ ದಂಡವಿಧಿಸುವ ಪರಿ, ದೌರ್ಜನ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ಶೀಘ್ರ ಅಂತಹ ಪೊಲೀಸ್ ಅಧಿಕಾರಿಗಳನ್ನು ಅಮಾನತು ಗೊಳಿಸಬೇಕು. ತಾಯಿ- ಮಗನಿಗೆ ನ್ಯಾಯ ದೊರಕಬೇಕು. ಇಲ್ಲವಾದಲ್ಲಿ ಇಂದಿನ ಸಾಂಕೇತಿಕ ಮೌನ ಪ್ರತಿಭಟನೆ ದೊಡ್ಡ ಮಟ್ಟದಲ್ಲಿ ಹಮ್ಮಿಕೊಂಡು ಠಾಣೆ ಎದುರು ಆಮರಣಾಂತ ಉಪವಾಸ ಕೈಗೊಳ್ಳುತ್ತೇವೆ ಎಂದು ತಿಳಿಸಿ, ಉಡುಪಿ ಡಿವೈಎಸ್ ಪಿ ಸುಧಾರಕ್ ನಾಯ್ಕ್ ಅವರಿಗೆ ಮನವಿ ನೀಡಿದರು.
ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ, ಕೋಟ ಠಾಣೆಯ ಪಿಎಸ್ ಐ ಸಂತೋಷ್ ಬಿ.ಪಿ., ಅಪರಾಧ ದಳದ ಪುಷ್ಪರಾಮ್, ನೊಂದ ಪ್ರಶಾಂತ್, ತಾಯಿ ಶಾರದಾ, ಪ್ರತಿಭಟನಾ ನಿರತರಾದ ಸುಧೀರ್, ಗಿರೀಶ್ , ಸಂದೀಪ್ ಕುಂದರ್ ಕೋಡಿ,ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
01/02/2021 10:31 pm