ಮಂಗಳೂರು: ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ದೇಶವಿರೋಧಿ ಗೋಡೆ ಬರಹದ ಬೆನ್ನಲ್ಲೇ ಇದೀಗ ಇನ್ನೊಂದು ವಿಕೃತಿಯ ಬರಹ ಕಂಡುಬಂದಿದೆ. ಮಂಗಳೂರಿನ ಹೊರವಲಯದ ಕೊಟ್ಟಾರ ಚೌಕಿ ಬಳಿ ಇರುವ ಶ್ರೀ ಕಲ್ಲುರ್ಟಿ, ಶ್ರೀ ಪಂಜುರ್ಲಿ ದೈವಸ್ಥಾನ ಹಾಗೂ ಅತ್ತಾವರ ಸನಿಹದ ಕೋಟೆದ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಗಳಿಗೆ ವಿಕೃತ ಮನಸ್ಥಿತಿಯ ದುಷ್ಕರ್ಮಿಗಳು ಕಾಂಡೋಮ್ ಹಾಗೂ ಅಸಭ್ಯ ಬರಹಗಳನ್ನು ಬರೆದಿರುವ 200, 20, 10 ರೂಪಾಯಿಗಳ ನೋಟ್ ಗಳನ್ನು ಹಾಕಿದ್ದು, ಸಾರ್ವಜನಿಕರ, ಭಕ್ತಾದಿಗಳ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
Kshetra Samachara
02/01/2021 03:10 pm